ಮೂಡುಬಿದಿರೆ: ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಮೂಡುಬಿದಿರೆಯಲ್ಲಿ ಮಧ್ಯಾಹ್ನ ೧.೨೫ರ ವೇಳೆಗೆ ಮಳೆ ಸುರಿದಿದೆ. ಬೆಳಗ್ಗೆಯಿಂದ ಬಿಸಿಲ ಝಳ ಹೆಚ್ಚಾಗಿತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಮಳೆ ಸುರಿದಿದೆ. ದೊಡ್ಡ ಗಾತ್ರದ ಹನಿಯೊಂದಿಗೆ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಕಂಗೆಟ್ಟ ಜನತೆಗೆ ತಣ್ಣನೆಯ ಅನುಭವ ನೀಡಿದೆ. ಹತ್ತು ನಿಮಿಷಗಳ ಕಾಲ ಮಳೆ ಸುರಿದಿದೆ. ಗುಡುಗಿನಾರ್ಭಟದೊಂದಿಗೆ ಮಳೆಯಾಗಿದೆ.
