ಕೇರಳವು ಪಾರಂಪರಿಕ ನಾಟಿ ಔಷಧಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆಯುರ್ವೇದ ಮತ್ತು ಸಿದ್ಧ ವೈದ್ಯ ಪದ್ಧತಿಗಳು ಇಲ್ಲಿ ಜನಪ್ರಿಯವಾಗಿದ್ದು, ಶತಮಾನಗಳಿಂದ ಈ ಔಷಧ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ಕೇರಳದ ಸಮೃದ್ಧ ಸಸ್ಯ ಸಂಪತ್ತಿನಿ0ದ ಆಯುರ್ವೇದ ಔಷಧಿಗಳನ್ನು ತಯಾರಿಸಲಾಗುತ್ತದೆ.
ಕೇರಳವು ಆಯುರ್ವೇದ ಚಿಕಿತ್ಸೆಗೆ ಪ್ರಸಿದ್ಧವಾಗಿದೆ. ಇಲ್ಲಿನ ಆಯುರ್ವೇದ ಚಿಕಿತ್ಸೆಯಲ್ಲಿ ಶುದ್ಧ ಹೇರಳತೆ, ನೈಸರ್ಗಿಕ ವಸ್ತುಗಳ ಬಳಕೆ ಮತ್ತು ವೈಜ್ಞಾನಿಕ ಶೋಧನೆಯ ಆಧಾರದ ಮೇಲೆ ಔಷಧಿಗಳನ್ನು ತಯಾರಿಸಲಾಗುತ್ತದೆ.
ಇದು ದೇಹವನ್ನು ಶುದ್ಧೀಕರಿಸುವ ಹಾಗೂ ಮಾನಸಿಕ-ಶಾರೀರಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುವ ವಿಧಾನವಾಗಿದೆ.
ಕೇರಳದಲ್ಲಿ ಜನಪ್ರಿಯವಾದ ನಾಟಿ ವೈದ್ಯರು ಕುಟುಂಬ ಪರಂಪರೆಯಿ0ದ ತಮ್ಮ ವೈದ್ಯಕೌಶಲ್ಯವನ್ನು ಮುಂದುವರಿಸಿದ್ದಾರೆ. ಅವರು ವಿದಿಗುಣ ಪರಿಚಯದ ಮೂಲಕ ವಿಶಿಷ್ಟ ಔಷಧಿಗಳನ್ನು ತಯಾರಿಸುತ್ತಾರೆ.
ಕೇರಳದ ನಾಟಿ ಔಷಧಿ ಪದ್ಧತಿ ಶತಮಾನಗಳಿಂದ ಜನರ ಜೀವನಶೈಲಿಗೆ ಅಳವಡಿಸಿಕೊಂಡಿದ್ದು, ಪ್ರಾಕೃತಿಕ ಸಂಪತ್ತನ್ನು ಆಧರಿಸಿ ಆಯುರ್ವೇದದ ಮೂಲಕ ಸಮಗ್ರ ಆರೋಗ್ಯ ಪರಿಹಾರವನ್ನು ಒದಗಿಸುತ್ತಿದೆ.
ಜನರು ಇಂದು ಅನುಭವಿಸುತ್ತಿರುವ ಚರ್ಮದ ಅಲರ್ಜಿ, ಬೆನ್ನು ನೋವು, ಮೈಕೈ ನೋವು, ದೇಹದ ವಿವಿಧ ಭಾಗಗಳಲ್ಲಿ ನೋವು, ಊತಗಳು, ನಿಶ್ಯಕ್ತಿ, ತಲೆನೋವು, ಮೈಗ್ರೇನ್, ನರಗಳ ಸಮಸ್ಯೆ, ಕುತ್ತಿಗೆ ನೋವು, ಪಾರ್ಶ್ವ ವಾಯು, ಕಾಲು ನೋವುಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತದೆ.
ಸೋಮವಾರ ಉದ್ಘಾಟನೆ: ಮೂಡುಬಿದಿರೆಯಿಂದ ಶಿರ್ತಾಡಿಗೆ ತೆರಳುವ ಹಾದಿಯಲ್ಲಿರುವ ಹೌದಾಲ್, ಸುವರ್ಣ ಕಾಂಪ್ಲೆಕ್ಸ್ ನಲ್ಲಿ ಈ ಕೇಂದ್ರ ಸೋಮವಾರದಿಂದ ಕಾರ್ಯಾರಂಭಗೊಳ್ಳಲಿದೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿ’ಸೋಜ ಉದ್ಘಾಟಿಸುವರು. ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯರಾದ ಶಶಿಕಲಾ, ಶ್ರೀಕಲಾ, ಪತ್ರಕರ್ತರಾದ ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು, ನವೀನ್ ಸಾಲ್ಯಾನ್, ಮಂದಾರ ರಾಜೇಶ್ ಭಟ್, ಉದ್ಯಮಿ ಸದಾನಂದ ಆರ್ ಸುವರ್ಣ ಪಾಲ್ಗೊಳ್ಳುವರು. ನಾಟಿ ವೈದ್ಯರಾದ ರೋಬಿ ಜೋಸೆಫ್ ಈ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ.