ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಜೆಪ್ಪು ವಾರ್ಡ್ನ ವಿವಿಧ ಕಡೆಗಳಲ್ಲಿ ಮತಯಾಚಿಸಿದರು.
ಈಗಾಗಲೇ ಇಡೀ ಕ್ಷೇತ್ರದ ವಾತಾವರಣ ಬಿಜೆಪಿ ಮಯವಾಗಿದೆ. ಗೆಲುವು ಖಚಿತವಾಗಿದ್ದು ಇನ್ನೇನಿದ್ದರೂ ಗೆಲುವಿನ ಅಂತರದ ಬಗ್ಗೆ ಯೋಚಿಸಲಾಗುತ್ತಿದೆ. ಕಾರ್ಯಕರ್ತ ಬಂಧುಗಳ ಶ್ರಮದಿಂದ ಬಿಜೆಪಿ ಇಂದು ದೇಶದೆಲ್ಲೆಡೆ ಅಭೂತಪೂರ್ವ ಗೆಲುವು ಸಾಧಿಸಿ ದೇಶವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುತ್ತಿದೆ. ಈ ಗೆಲುವಿನ ನಾಗಾಲೋಟ ಮುಂದುವರೆಯಲಿದೆ” ಎಂದು ವಿಶ್ವಾಸದಿಂದ ನುಡಿದರು. ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು, ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
