ಶ್ರೀ ಕ್ಷೇತ್ರ ಪಡ್ಯಾರಬೆಟ್ಟದಲ್ಲಿ ವರ್ಷಾವಧೀ ಜಾತ್ರಾ ಸಂಭ್ರಮ
ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ೧೪:೦೩:೨೦೨೫ ರಿಂದ ೧೯:೦೩:೨೦೨೫ ರ ತನಕ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ತಿಳಿಸಿದ್ದಾರೆ.
ತಾರೀಕು ೧೪:೦೩:೨೦೨೫ನೇ ಶುಕ್ರವಾರ ಮೀನ ಸಂಕ್ರಮಣ ದಿನ ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ ರಾತ್ರಿ ಗಂಟೆ ೦೯:೩೦ಕ್ಕೆ ಪಡೋಡಿಗುತ್ತಿನಲ್ಲಿ ಉಪಹಾರ ರಾತ್ರಿ ಗಂಟೆ ೧೦:೦೦ಕ್ಕೆ ಪಡೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಕ್ಷೇತ್ರಕ್ಕೆ ಆಗಮನ, ದ್ವಜಾರೋಹಣ, ಬಲಿ, ಚೆಂಡು ಉತ್ಸವ ನಡೆಯಲಿದೆ.
೧೫:೦೩:೨೦೨೫ ಭೂತಬಲಿ ಉತ್ಸವ, ತಾರೀಕು ೧೬:೦೩:೨೦೨೫ನೇ ಭಾನುವಾರ ಅಂಬೋಡಿ, ಬಲಿ, ಉತ್ಸವ ಹೂವಿನ ಪೂಜೆ, ರಥಾರೋಹಣ, ತಾರೀಕು ೧೭:೦೩:೨೦೨೫ನೇ ಸೋಮವಾರ ವರ್ಷಾವಧಿ ಜಾತ್ರೋತ್ಸವ
ಮಧ್ಯಾಹ್ನ ಗಂಟೆ ೧೨:೦೦ರಿಂದ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ ೧:೩೦ ರಿಂದ ೭:೩೦ರ ತನಕ ಮಹಾ ಅನ್ನಸಂತರ್ಪಣೆ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ. ತಾರೀಕು ೧೮:೦೩:೨೦೨೫ನೇ ಮಂಗಳವಾರ ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು. ತಾರೀಕು ೧೯:೦೩:೨೦೨೫ನೇ ಬುಧವಾರ ರಾತ್ರಿ ಗಂಟೆ ೭:೩೦ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ.
ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿ ರಿವಾಜು ಕಟ್ಟು ಕಟ್ಟಳೆಗಳ ಪ್ರಕಾರ ಮಾರೂರು ಖಂಡಿಗ ಶ್ರೀ ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಧ್ಯುಕ್ತವಾಗಿ ಜರಗಲಿರುವುದು. ಈ ಪುಣ್ಯಪ್ರದ ಮಹೋತ್ಸವಕ್ಕೆ ತಾವು ತಮ್ಮ ಇಷ್ಟ ಮಿತ್ರ ಬಂಧು ಭಾಂದವರೊಡನೆ ಚಿತ್ತೈಸಿ ಈ ಸತ್ಕಾರ್ಯದಲ್ಲಿ ಭಾಗವಹಿಸಿ, ಪವಿತ್ರ ಕ್ಷೇತ್ರದ ಪರಮ ಪಾವನ ಸಿರಿಮುಡಿ ಗಂಧ – ಪ್ರಸಾದ ಸ್ವೀಕರಿಸಿ ಶ್ರೀ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಧರ್ಮದರ್ಶಿಗಳಾದ ಎ. ಜೀವಂಧರ ಕುಮಾರ್ ಭಕ್ತಾಧಿಗಳಲ್ಲಿ ವಿನಂತಿಸಿದ್ದಾರೆ.
ಜಾತ್ರೋತ್ಸವದಂಗವಾಗಿ ೧೯-೦೩-೨೦೨೫ ನೇ ಬುಧವಾರ ರಾತ್ರಿ ಗಂಟೆ ೮ ರಿಂದ ಜೀ ಕನ್ನಡ ಸರಿಗಮಪ ಖ್ಯಾತಿಯ ಕರ್ನಾಟಕದ ಹೆಸರಾಂತ ಕಲಾವಿದೆ ವಿದುಷಿ ಸಾಧ್ವನಿ ಕೊಪ್ಪ ಮತ್ತು ತಂಡದವರಿ0ದ “ಗಾನ ಸುರಭಿ” ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಹಳೆಯ ಚಲನಚಿತ್ರ ಗೀತೆಗಳ ಸಮ್ಮಿಲನ ನಡೆಯಲಿದೆ.