ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಅಭೂತಪೂರ್ವ ರೋಡ್ ಶೋನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದರು ನಳಿನ್ ಕುಮಾರ್ ಕಟೀಲ್ ಹಾಗು ಜಿಲ್ಲಾಧ್ಯಕ್ಷ ಸುದರ್ಶನ ಎಂ. ಭಾಗವಹಿಸಿದರು. ಮೆರವಣಿಗೆ ರಸ್ತೆ ಉದ್ದಕ್ಕೂ ಜನತೆ ಪಕ್ಷಕ್ಕೆ ತೋರಿದ ಅಭೂತಪೂರ್ವ ಬೆಂಬಲವು ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂಬುದನ್ನು ಸಾರುವಂತಿತ್ತು.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಾನುರಾಗಿಯಾಗಿದ್ದಾರೆ. ಜನತೆ ಅವರನ್ನು ಬೆಂಬಲಿಸುತ್ತಿದ್ದಾರೆ. ರೋಡ್ ಶೋ ನಲ್ಲಿ ಪಾಲ್ಗೊಂಡ ಜನತೆಯೇ ಅದಕ್ಕೆ ಸಾಕ್ಷಿಯಾಗಿದ್ದಾರೆ. ವೇದವ್ಯಾಸ ಕಾಮತ್ ಅವರ ಗೆಲುವು ನಿಶ್ಚಿತ ಎಂದು ಮಾಧ್ಯಮದೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಅಭಿಪ್ರಾಯ ಪಟ್ಟರು.
