ಕಾಡುಜೇನು

ಕಾಡುಜೇನು ಹಲವು ರೋಗಗಳಿಗೆ ಮದ್ದು, ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆ.ಹೈಲೈಟ್ಸ್‌:
ಕಲಬೆರಕೆ ಇಲ್ಲದ ನೈಸರ್ಗಿಕವಾಗಿ ಸಂಗ್ರಹವಾಗುವ ಈ ಜೇನುತುಪ್ಪ ಹಲವು ರೀತಿಯ ಮನೆ ಔಷಧಿಗಳಿಗೆ ಬಳಕೆ.
ಮರ, ಪೊಟರೆ, ಬಿದಿರುಗಳಲ್ಲಿ ಗೂಡು ಕಟ್ಟುವ ಜೇನನ್ನು ತೆಗೆಯುವುದು ಅಷ್ಟೇ ಕಷ್ಟದ ಕೆಲಸ.
ಕಳೆದ ಮೂರು ವರ್ಷಗಳಲ್ಲಿ ಮಾರ್ಚ್ನಿಂದಲೇ ಆರಂಭವಾದ ಮಳೆ ಕಾಡುಜೇನಿಗೂ ಹೊಡೆತ ನೀಡಿತ್ತು.
ADVT:ಮೆಗಾ ಸೇಲ್! ವಾಚ್‌ಗಳು ಹಾಗೂ ಸ್ಮಾರ್ಟ್‍ವಾಚ್‍ಗಳ ಮೇಲೆ 60% ಆಫರ್..
ಮಂಗಳೂರು:ಏಪ್ರಿಲ್‌ನಿಂದ ಸಾಮಾನ್ಯವಾಗಿ (ಮೇ ತಿಂಗಳ 4ನೆ ವಾರ) ತನಕ ಸಿಗುವ ಕಾಡು ಜೇನಿಗೆ ಉತ್ತಮ ಬೇಡಿಕೆ ಇದೆ. ಈ ಬಾರಿ ಮಳೆ ಬಾರದಿರುವುದರಿಂದ ಕಾಡು ಜೇನಿನ ಇಳುವರಿ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೊರಗ ಸಮುದಾಯದವರು ಕಾಡು ಜೇನಿನ ಬಿಡಾರಗಳನ್ನು ಹುಡುಕುವುದರಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ.

ಗ್ರಾಮಗಳ ಅಲ್ಲಲ್ಲಿ ಇರುವ ಇವರಿಗೆ ಸುಮಾರು ಒಂದೂವರೆ ತಿಂಗಳ ಕಾಲ ಕಾಡುಜೇನು ಸಂಗ್ರಹ ಒಂದು ಕಸುಬಾಗಿದ್ದು ಆದಾಯದ ಮೂಲವಾಗಿದೆ. ಶುದ್ಧ ಹಾಗೂ ನೈಸರ್ಗಿಕವಾದ ಕಾಡುಜೇನನ್ನು ಇವರು ಎರಿಗಳ ಸಹಿತ ಸಂಗ್ರಹಿಸಿ ಮನೆಗಳಿಗೆ ತಂದು ಮಾರಾಟ ಮಾಡುತ್ತಾರೆ. ಈ ರೀತಿಯ ಕಲಬೆರಕೆ ಇಲ್ಲದ ನೈಸರ್ಗಿಕವಾಗಿ ಸಂಗ್ರಹವಾಗುವ ಈ ಜೇನುತುಪ್ಪ ಹಲವಾರು ರೀತಿಯ ಮನೆ ಔಷಧಿಗಳಿಗೆ ಬಳಕೆಯಾಗುತ್ತಿದ್ದು ಇದಕ್ಕೆ ಭಾರಿ ಬೇಡಿಕೆಯೂ ಇದೆ. ಇಲ್ಲಿ ಲೀಟರ್‌ ಅಥವಾ ಕೆಜಿ ಲೆಕ್ಕ ಇರುವುದಿಲ್ಲ. ಕುಡ್ತೆಗಳ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತದೆ. ಪ್ರಸ್ತುತ ಕುಡ್ತ ಒಂದಕ್ಕೆ 100 ರಿಂದ 120 ರೂ.ದರ ಇದೆ.

ಕಠಿಣ ಕೆಲಸ
ಎತ್ತರದ ಮರ, ಬಿದಿರುಗಳ ಪೊಟರೆ, ಹುತ್ತ ಮೊದಲಾದ ಅಪಾಯಕಾರಿ ಪ್ರದೇಶಗಳಲ್ಲಿ ಜೇನುಗೂಡು ಕಂಡುಬರುತ್ತದೆ. ಜೇನುಗೂಡುಗಳು ಕಂಡು ಬಂದರು ಅವನ್ನು ತೆಗೆಯುವುದು ಅಷ್ಟೇ ಕಷ್ಟದ ಕೆಲಸ. ಮರ, ಪೊಟರೆ, ಬಿದಿರುಗಳಲ್ಲಿ ಗೂಡು ಕಟ್ಟಿದರೆ ಹಗ್ಗ,ಕತ್ತಿ, ಕೊಡಲಿ, ಪಾತ್ರೆ ಇತ್ಯಾದಿಗಳನ್ನು ಹಿಡಿದುಕೊಂಡು ಮರವನ್ನು ಏರಬೇಕು. ಬಳಿಕ ಅಲ್ಲಿಂದ ಜೇನುನೊಣಗಳ ಪೆಟ್ಟನ್ನು ತಪ್ಪಿಸಿಕೊಂಡು ಹೆಚ್ಚಿನ ಮುಂಜಾಗ್ರತೆಯಿಂದ ಜೇನು ಕೆಳಗಿಳಿಸಬೇಕು. ಇದಕ್ಕೆ ಮರ ಏರುವ ಚಾಕಚಕ್ಯತೆ ಹೊಂದಿರುವವರ ಜತೆ ಇನ್ನೂ ಒಂದೆರಡು ಜನರು ಬೇಕಾಗುತ್ತಾರೆ.

ನಿರ್ದಿಷ್ಟ ಬ್ರ್ಯಾಂಡ್‌ನಡಿ ಜಾಗತಿಕ ಮಾರುಕಟ್ಟೆಗೆ ಕರುನಾಡಿನ ಸವಿ ಜೇನು – ತೋಟಗಾರಿಕಾ ಇಲಾಖೆ ಪ್ರಯತ್ನ

ಲಭ್ಯತೆಗೆ ಕಾರಣ
ಕಳೆದ ಮೂರು ವರ್ಷಗಳಲ್ಲಿ ಮಾರ್ಚ್‌ನಿಂದಲೇ ಆರಂಭವಾದ ಮಳೆ ಕಾಡುಜೇನಿಗೂ ಹೊಡೆತ ನೀಡಿತ್ತು. ಸಾಮಾನ್ಯವಾಗಿ ಮಾರ್ಚ್‌ನಿಂದ ಜೇನು ಸಂಗ್ರಹ ಆರಂಭಿಸುವ ಜೇನು ಹುಳಗಳು ಮಳೆ ಬಿದ್ದ ಕೂಡಲೇ ತಮ್ಮ ಗೂಡಿನಲ್ಲಿ ಸಂಗ್ರಹವಾದ ಜೇನನ್ನು ಕುಡಿದು ಸ್ಥಳ ಬದಲಾಯಿಸುತ್ತವೆ. ಆದರೆ ಈ ಬಾರಿ ಇನ್ನೂ ಕೂಡ ಮಳೆ ಇಲ್ಲದಿರುವುದರಿಂದ ಜೇನುಗೂಡುಗಳಲ್ಲಿ ಸಂಗ್ರಹಗೊಂಡಿರುವ ಜೇನು ಹಾಗೆ ಇದೆ.

‘‘ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಾಡು ಜೇನು ಲಭ್ಯತೆ ಹೆಚ್ಚಿದೆ. ಮಳೆ ಆರಂಭವಾದರೆ ಜೇನು ಕುಟುಂಬಗಳು ತಕ್ಷಣ ತಮ್ಮ ವಾಸ್ತವ್ಯ ಬದಲಿಸುತ್ತವೆ. ಮಳೆ ನೀರು ಬೀಳದ ಪ್ರದೇಶಗಳಲ್ಲಿ ಗೂಡು ನಿರ್ಮಿಸಿದರೆ ಹಲವು ಕಾಲ ಅಲ್ಲೇ ವಾಸಿಸುತ್ತವೆ’’ ಎಂದು ಹಿರಿಯ ಜೇನು ಸಂಗ್ರಾಹಕರು ಮಾಹಿತಿ ಹಂಚಿಕೊಂಡಿದ್ದಾರೆ.

Share

Leave a Reply

Your email address will not be published. Required fields are marked *