Petrol and Diesel Rate Today: ಇಂದು ಇಂಧನ ಎಂಬುದು ಜಗತ್ತಿನ ಅತಿ ಅಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಅದರಲ್ಲೂ ಪೆಟ್ರೋಲ್ (Petrol Rate) ಹಾಗೂ ಡೀಸೆಲ್ ಇಂಧನಗಳಿಗಂತೂ (Diesel Rate) ಎಲ್ಲಿಲ್ಲದ ಬೇಡಿಕೆಯಿದೆ. ನಿತ್ಯ ವಾಹನಗಳ ಓಡಾಟದಿಂದ ಹಲವು ಅವಶ್ಯಕ ಕಾರ್ಖಾನೆಗಳ ಕಾರ್ಯಾಚರಣೆಗೆ ಈ ಇಂಧನದ ಅವಶ್ಯಕತೆ ಇರುತ್ತದೆ.
ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಇನ್ನು ಈ ಇಂಧನಗಳನ್ನು ಕಚ್ಚಾತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ನಿಕ್ಷೇಪಗಳಿರುವ ರಾಷ್ಟ್ರಗಳು ಇದನ್ನು ಹೊರತೆಗೆದು ಮಾರಾಟ ಮಾಡುತ್ತವೆ.
ಜಗತ್ತಿನ ಇತರೆ ರಾಷ್ಟ್ರಗಳು ತಮಗೆ ಬೇಕಾಗುವಷ್ಟು ಕಚ್ಚಾ ತೈಲವನ್ನು ಖರೀದಿಸುತ್ತವೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಭಾರತ ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ತನ್ನಲ್ಲಿರುವ ರಿಫೈನರಿಗಳ ಮೂಲಕ ಅದನ್ನು ಸಂಸ್ಕರಿಸಿ ಇತರೆ ಭಾಗಗಳಿಗೆ ವಿತರಿಸುತ್ತದೆ.
ಇದನ್ನೂ ಓದಿ: VIDA V1 Pro: ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 15 ಸಾವಿರ ರಿಯಾಯಿತಿ! ಬಡ್ಡಿ ಇಲ್ಲದೆ EMIನಲ್ಲಿ ಸ್ಕೂಟಿ ಖರೀದಿಸಿ
ಇಂದು ಎಂದಿನಂತೆ ರಾಜ್ಯದೆಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ದರ ನಿತ್ಯದಂತೆ ಸ್ಥಿರವಾದ ಬೆಲೆಯಲ್ಲೇ ಮುಂದುವರೆದಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ.102.48 (7 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 101.94 (15 ಪೈಸೆ ಇಳಿಕೆ)
ಬೆಳಗಾವಿ – ರೂ. 102.59 (5 ಪೈಸೆ ಇಳಿಕೆ)
ಬಳ್ಳಾರಿ – ರೂ. 103.61 (12 ಪೈಸೆ ಇಳಿಕೆ)
ಬೀದರ್ – ರೂ. 102.28 (00)
ವಿಜಯಪುರ – ರೂ. 101.72 (00)
ಚಾಮರಾಜನಗರ – ರೂ. 102.10 (4 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.94 (45 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 102.60 (20 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 102.73 (90 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.85 (72 ಪೈಸೆ ಏರಿಕೆ)
ದಾವಣಗೆರೆ – ರೂ. 103.14 (49 ಪೈಸೆ ಇಳಿಕೆ)
ಧಾರವಾಡ – ರೂ. 101.71 (1 ಪೈಸೆ ಏರಿಕೆ)
ಗದಗ – ರೂ. 102.38 (13 ಪೈಸೆ ಏರಿಕೆ)
ಕಲಬುರಗಿ – ರೂ. 101.71 (00)
ಹಾಸನ – ರೂ. 102.05 (15 ಪೈಸೆ ಏರಿಕೆ)
ಹಾವೇರಿ – ರೂ. 102.41 (48 ಪೈಸೆ ಇಳಿಕೆ)
ಕೊಡಗು – ರೂ. 103.17 (2 ಪೈಸೆ ಇಳಿಕೆ)
ಕೋಲಾರ – ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ – ರೂ. 103.10 (5 ಪೈಸೆ ಏರಿಕೆ)
ಮಂಡ್ಯ – ರೂ. 102.17 (00)
ಮೈಸೂರು – ರೂ. 101.50 (00)
ರಾಯಚೂರು – ರೂ. 101.84 (83 ಪೈಸೆ ಇಳಿಕೆ)
ರಾಮನಗರ – ರೂ. 102.39 (00)
ಶಿವಮೊಗ್ಗ – ರೂ. 102.59 (3 ಪೈಸೆ ಇಳಿಕೆ)
ತುಮಕೂರು – ರೂ. 102.81 (36 ಪೈಸೆ ಏರಿಕೆ)
ಉಡುಪಿ – ರೂ. 101.81 (22 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 103.79 (85 ಪೈಸೆ ಏರಿಕೆ)
ವಿಜಯನಗರ – ರೂ. 103.34 (22 ಪೈಸೆ ಏರಿಕೆ)
ಯಾದಗಿರಿ – ರೂ. 102.43 (12 ಪೈಸೆ ಏರಿಕೆ)
ಇದನ್ನೂ ಓದಿ: Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 88.40
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.89
ಬೆಳಗಾವಿ – ರೂ. 88.50
ಬಳ್ಳಾರಿ – ರೂ. 89.42
ಬೀದರ್ – ರೂ. 88.23
ವಿಜಯಪುರ – ರೂ. 87.71
ಚಾಮರಾಜನಗರ – ರೂ. 88.04
ಚಿಕ್ಕಬಳ್ಳಾಪುರ – ರೂ. 87.89
ಚಿಕ್ಕಮಗಳೂರು – ರೂ. 88.29
ಚಿತ್ರದುರ್ಗ – ರೂ. 88.51
ದಕ್ಷಿಣ ಕನ್ನಡ – ರೂ. 87.78
ದಾವಣಗೆರೆ – ರೂ. 88.88
ಧಾರವಾಡ – ರೂ. 87.71
ಗದಗ – ರೂ. 88.31
ಕಲಬುರಗಿ – ರೂ. 87.71
ಹಾಸನ – ರೂ. 87.90
ಹಾವೇರಿ – ರೂ. 88.34
ಕೊಡಗು – ರೂ. 88.86
ಕೋಲಾರ – ರೂ. 87.77
ಕೊಪ್ಪಳ – ರೂ. 88.96
ಮಂಡ್ಯ – ರೂ. 88.10
ಮೈಸೂರು – ರೂ. 87.49
ರಾಯಚೂರು – ರೂ. 87.84
ರಾಮನಗರ – ರೂ. 88.29
ಶಿವಮೊಗ್ಗ – 88.43
ತುಮಕೂರು – ರೂ. 88.68
ಉಡುಪಿ – ರೂ. 87.74
ಉತ್ತರ ಕನ್ನಡ – ರೂ. 89.52
ವಿಜಯನಗರ – ರೂ. 89.18
ಯಾದಗಿರಿ – ರೂ. 88.36