ಲೈಫ್‌ಸ್ಪೇಸಸ್

ಏಪ್ರಿಲ್‌ 25ರಂದು ಮಂಗಳವಾರ ಸೆಕ್ಸೆಕ್ಸ್‌ 150 ಅಂಕ ಏರಿಕೆ ಕಂಡಿದ್ದು ನಿಫ್ಟಿ 50ಯು 17,750ಕ್ಕಿಂತ ಮೇಲೆ ವಹಿವಾಟು ನಡೆಸುತ್ತಿದೆ. ಈ ವೇಳೆ ಇಪ್ಕಾ ಲ್ಯಾಬೊರೇಟರೀಸ್, ಮಹೀಂದ್ರಾ ಲೈಫ್‌ಸ್ಪೇಸಸ್ ಹಾಗೂ ಅನುಪಮ್ ರಸಾಯನ್ ಷೇರುಗಳು ವಿವಿಧ ಕಾರಣಗಳಿಗಾಗಿ ಏರಿಕೆ ಕಾಣುತ್ತಿದ್ದು, ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸಲೇಬೇಕಾದ ಪ್ರಮುಖ ಷೇರುಗಳು ಆಗಿವೆ. ಜತೆಗೆ ಬಜಾಜ್ ಅವಳಿ ಷೇರುಗಳು ಶೇಕಡಾ 2ರವರೆಗೆ ಗಳಿಕೆ ದಾಖಲಿಸಿದ್ದು, ಫಾರ್ಮಾ ವಲಯ ಹೊರತುಪಡಿಸಿ ಎಲ್ಲಾ ವಲಯಗಳು ಗಳಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ.
Trending Stock
ಸೆನ್ಸೆಕ್ಸ್ ಮಂಗಳವಾರ 150 ಅಂಕ ಏರಿಕೆ ಕಂಡಿದ್ದು, ನಿಫ್ಟಿ 17,750ಕ್ಕಿಂತ ಮೇಲೆ ವಹಿವಾಟು ನಡೆಸುತ್ತಿದೆ. ಬಜಾಜ್ ಅವಳಿ ಷೇರುಗಳು ಶೇ. 2ರವರೆಗೆ ಗಳಿಕೆ ದಾಖಲಿಸಿವೆ. ಫಾರ್ಮಾ ವಲಯ ಹೊರತುಪಡಿಸಿ ಎಲ್ಲಾ ವಲಯಗಳು ಉನ್ನತ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.

ADVT:ಮೆಗಾ ಸೇಲ್! ವಾಚ್‌ಗಳು ಹಾಗೂ ಸ್ಮಾರ್ಟ್‍ವಾಚ್‍ಗಳ ಮೇಲೆ 60% ಆಫರ್..
ಮಂಗಳವಾರ ಹೂಡಿಕೆದಾರರು ಪ್ರಮುಖ ತ್ರೈಮಾಸಿಕ ಫಲಿತಾಂಶಗಳಿಗಾಗಿ ಕಾಯುತ್ತಿದ್ದು, ಭಾರತೀಯ ಷೇರುಗಳು ಏರಿಕೆ ಕಂಡಿವೆ. ಇನ್ಫರ್ಮೇಷನ್‌ ಟೆಕ್ನಾಲಜಿ (ಐಟಿ) ಮತ್ತು ಫಾರ್ಮ್ಯಾಸ್ಯುಟಿಕಲ್‌ ಷೇರುಗಳು ತಲಾ ಶೇ. 0.5ರಷ್ಟು ಕುಸಿತ ಕಂಡಿದ್ದು, 13 ಪ್ರಮುಖ ವಲಯಗಳಲ್ಲಿ ಏಳು ಇಳಿಕೆಯಲ್ಲಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಮತ್ತು ಇನ್ಫೋಸಿಸ್‌ನಂತಹ ದೊಡ್ಡ ಸಂಸ್ಥೆಗಳ ನಿರಾಶಾದಾಯಕ ಗಳಿಕೆ ಮತ್ತು ದೃಷ್ಟಿಕೋನದಿಂದಾಗಿ ಕಳೆದ ವಾರ ಐಟಿ ಷೇರುಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದ್ದವು. ಆದರೆ ಸೋಮವಾರ, ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅತ್ಯುತ್ತಮ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಪರಿಣಾಮ ಮಾರುಕಟ್ಟೆಗಳು ಏರಿಕೆ ಕಂಡಿದ್ದು, ಹೂಡಿಕೆದಾರರ ಭಾವನೆಯು ಸುಧಾರಿಸಿದೆ.

ಏ. 25ರಂದು ಮಂಗಳವಾರ ಗಮನಿಸಲೇಬೇಕಾದ 3 ಟ್ರೆಂಡಿಂಗ್‌ ಷೇರುಗಳಿವು

ಇಪ್ಕಾ (IPCA) ಲ್ಯಾಬೊರೇಟರೀಸ್: ಏಪ್ರಿಲ್ 25ರಂದು ಮಂಗಳವಾರ ಇಪ್ಕಾ ಲ್ಯಾಬೊರೇಟರೀಸ್ ತನ್ನ ಮಾಲೀಕರಲ್ಲಿ ಒಬ್ಬರಿಂದ 1,034.06 ಕೋಟಿ ರೂ.ಗೆ ಯುನಿಚೆಮ್ ಲ್ಯಾಬೊರೇಟರೀಸ್‌ನ ಶೇ. 33.38ರಷ್ಟು ಷೇರನ್ನು ಖರೀದಿಸಲು ಒಪ್ಪಿಗೆ ನೀಡಿದೆ. ಷೇರು ಖರೀದಿ ಒಪ್ಪಂದದ ಪ್ರಕಾರ ಇಪ್ಕಾ ಕಂಪನಿಯು, ಯುನಿಚೆಮ್‌ನ 2,35,01,440 ಷೇರುಗಳಿಗೆ ಪ್ರತಿ ಷೇರಿಗೆ 440 ರೂಪಾಯಿಗಳಂತೆ ಒಟ್ಟು 1,034.06 ಕೋಟಿ ರೂ.ಗಳನ್ನು ಪಾವತಿಸಿ ಕಂಪನಿಯ ಮಾಲೀಕರೊಬ್ಬರಿಂದ ಷೇರುಗಳನ್ನು ಖರೀದಿಸಲಿದೆ. ಈ ಮಾಹಿತಿಯನ್ನು ವಿನಿಮಯ ಮಾರುಕಟ್ಟೆಗೆ ಸಲ್ಲಿಸುವ ಮೂಲಕ ಕಂಪನಿಯು ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ.

ಮಹೀಂದ್ರಾ ಲೈಫ್‌ಸ್ಪೇಸಸ್: ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಬಿಡುಗಡೆಗೂ ಮುನ್ನ ಮಹೀಂದ್ರಾ ಲೈಫ್‌ಸ್ಪೇಸ್ ಪ್ರಾಜೆಕ್ಟ್‌ ಒಂದನ್ನು ಗೆದ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಲಾಭ ದಾಖಲಿಸಿದೆ. ಇದರ ಪರಿಣಾಮ ದಿನದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಬಿಡುಗಡೆಗೂ ಮುನ್ನ ಮಹೀಂದ್ರಾ ಲೈಫ್‌ಸ್ಪೇಸ್ ಡೆವಲಪರ್ಸ್‌ ಷೇರುಗಳು ಸುಮಾರು ಶೇ. 1.5ರಷ್ಟು ಏರಿಕೆ ಕಂಡಿವೆ. ಈ ಮೂಲಕ ಏಪ್ರಿಲ್‌ನಲ್ಲಿ ತನ್ನ ಏರಿಕೆಯ ಟ್ರೆಂಡ್‌ ಅನ್ನು ಮುಂದುವರಿಸಿದೆ. ಸರಿಸುಮಾರು 850 ಕೋಟಿ ರೂ.ಗಳ ಸಂಭಾವ್ಯ ಆದಾಯದೊಂದಿಗೆ ಉಪನಗರ ಮುಂಬೈನಲ್ಲಿ ವಸತಿ ಸೊಸೈಟಿಯನ್ನು ಪುನರಾಭಿವೃದ್ಧಿ ಮಾಡಲು ಮಹೀಂದ್ರಾ ಗ್ರೂಪ್‌ನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಿಭಾಗವು ಆದ್ಯತೆಯ ಪಾಲುದಾರ ಸಂಸ್ಥೆಯಾಗಿದೆ. ಹೀಗಾಗಿ ಕಂಪನಿ ಷೇರುಗಳು ಏರಿಕೆ ಕಂಡಿವೆ.

Share

Leave a Reply

Your email address will not be published. Required fields are marked *