ಕರ್ನಾಟಕಕ್ಕೆ ನೂತನ ಮುಖ್ಯಮಂತ್ರಿ?

ಈ ದಿನ ವಿಶೇಷ

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯೇ? ಹೌದು. ಈ ವಿಚಾರ ಸ್ಪಷ್ಟವಾಗಿದೆ. ಈ ಹಿಂದಿನಿAದಲೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದರೂ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟದಿಂದ ಕೆಳಗಿಳಿಯುವ ಸೂಚನೆ ಲಭಿಸಿರಲಿಲ್ಲ. `ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ’ ಎಂಬAತೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ನೂತನ ಮುಖ್ಯಮಂತ್ರಿ ನೇಮಕಕ್ಕೆ ಕ್ಷಣ ಗಣನೆ ಆರಂಭವಾಗಿದೆ.

The Chief Minister of Karnataka, Shri Siddaramaiah

ಮೇ ಅಂತ್ಯದಲ್ಲಿ ನೂತನ ಮುಖ್ಯಮಂತ್ರಿ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ದಾಖಲೆ ಮಾಡಿದ್ದಾರೆ.
ಮೇ ೨೦೨೩ ರಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ೨೦೧೩ ರಿಂದ ೨೦೧೮ ರವರೆಗೆ ಮೊದಲ ಅವಧಿಗೆ ಆ ಹುದ್ದೆಯನ್ನು ಅಲಂಕರಿಸಿದ್ದರು, ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜಾಹೀರಾತು

ಜನವರಿ ೨೦೨೬ ರಲ್ಲಿ ಅವರು ಡಿ. ದೇವರಾಜ್ ಅರಸ್ ಅವರ ದಾಖಲೆಯನ್ನು ಮೀರಿಸುವ ಮೂಲಕ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾದರು. ಇದೀಗ ದಾಖಲೆ ಮುರಿದ ನಂತರ ತನ್ನ ಕುರ್ಚಿಯಿಂದ ಕೆಳಗಿಳಿಯುವ ನಿರ್ಧಾರವನ್ನು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ಕಾರಣಕ್ಕಾಗಿಯೇ ಅಧಿವೇಶನದ ನಂತರ `ಫೋಟೋಶೂಟ್’ ನಡೆಸಲಾಯಿತು ಎಂದು ವಿಶ್ಲೇಷಿಸಲಾಗಿದೆ.
ಅಂತೂ ಇಂತೂ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯ `ಭಾಗ್ಯ’ ಲಭ್ಯವಾಗುತ್ತಿದೆ. ಮೇ ಅಂತ್ಯದಲ್ಲಿ ನೂತನ ಪಟ್ಟಾಭಿಷೇಕಕ್ಕೂ ಮುಹೂರ್ತ ಫಿಕ್ಸ್ ಆಗಿದೆಯಂತೆ.

 

Share

Leave a Reply

Your email address will not be published. Required fields are marked *