ಮೂಡುಬಿದಿರೆ: ಸ್ವಾಮೀಸ್ ಸ್ಟ್ರೆಂಗ್ತ್ ಟ್ರೈನಿಂಗ್ ಸಂಸ್ಥೆ ಸಮಾಜ ಸೇವಕ, ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆ ಅವರಿಗೆ `ಸಮಾಜ ರತ್ನ’ ಪುರಸ್ಕಾರ ನೀಡಿ ಗೌರವಿಸಿದೆ.

ಶನಿವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ `ಬೆದ್ರ ಕ್ಲಾಸಿಕ್ ೨೦೨೬’ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್ ಚಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಸಂಘ, ಸಂಘಟನೆಗಳು, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಹಿನ್ನಲೆಯಲ್ಲಿ ಅಮರ್ ಕೋಟೆ ಅವರಿಗೆ ಈ ಬಿರುದು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿನಯ್ ಕುಮಾರ್, ಸಂತೋಷ್ ಪೂಜಾರಿ ಮತ್ತು ಹನೀಫ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಲಕರಾದ ಸ್ವಾಮಿ ಪ್ರಸಾದ್ ಸಹಿತ ಗಣ್ಯರು ಇದ್ದರು.
