ಸ್ಮಾರ್ಟ್ ಕಾರ್ಡ್ ಬಿಡುಗಡೆ ಸಮಾರಂಭ ಸೆ.20ರಂದು
ಪೆರ್ಡೂರು: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಭಕ್ತರ ಸಹಕಾರದೊಂದಿಗೆ ಸುಸೂತ್ರವಾಗಿ ಕೈಗೊಳ್ಳುವ ಉದ್ದೇಶದಿಂದ ‘ಅನಂತ ಸಂಕಲ್ಪ’ ಎಂಬ ವಿಶೇಷ ಯೋಜನೆಯನ್ನು ರೂಪಿಸಲಾಗಿದ್ದು, ಇದರ ಅಂಗವಾಗಿ ಸ್ಮಾರ್ಟ್ ಕಾರ್ಡ್ ಬಿಡುಗಡೆ ಸಮಾರಂಭ ಸೆ.20ರಂದು ಸಂಜೆ 4 ಗಂಟೆಗೆ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ| ಹೆಚ್ ಎಸ್ ಬಲ್ಲಾಳ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಹಿರಿಯ ಅರ್ಚಕರಾದ ಪಿ.ಕೃಷ್ಣ ಅಡಿಗ, ಉದ್ಯಮಿಗಳು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಿ.ದಿನೇಶ್ ಹೆಗ್ಡೆ ಪೆರ್ಡೂರು, ಕ್ಷೇತ್ರದ ಹಿರಿಯ ತಂತ್ರಿಗಳಾದ ಕೆ.ಜಿ.ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಾಂತಾರಾಮ ಸೂಡ ಕೆ ವಹಿಸಲಿದ್ದಾರೆ.

ವಿಶೇಷ ಅಭ್ಯಾಗತರಾಗಿ ಕೆ.ಜಿ.ವಿಠಲ ತಂತ್ರಿ ಕೊರಂಗ್ರಪಾಡಿ, ಸುಧಾಕರ ಶೆಟ್ಟಿ ಕುಕ್ಕುಂಜಾರು, ಸಂತೋಷ್ ಸುವರ್ಣ, ಉದಯ ಶೆಟ್ಟಿ, ಡಾ.ವಿಜಯಭಾನು ಶೆಟ್ಟಿ ಕುಕ್ಕುಂಜಾರು, ಭುಜಂಗ ಶೆಟ್ಟಿ ಬೆಳ್ಳರ್ಪಾಡಿ, ಶುಭಕರ ಆಚಾರ್ಯ ಪೆರ್ಡೂರು, ದಿನೇಶ ಪೂಜಾರಿ ಹೋಳಿಂಜೆ, ಮಂಜುನಾಥ ಶೇರಿಗಾರ್, ಯೋಗೀಶ ಮಲ್ಯ ಕಡ್ತಲ, ದಿನೇಶ ಶೆಟ್ಟಿ ದೊಡ್ಮನೆ, ಲಕ್ಷ್ಮಣ್ ಗಾಂಸ್, ಕೆ.ಪಿ.ಕುಮಾರಗುರು ತಂತ್ರಿ, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಬಿ.ಎಸ್ ರಾಮಚಂದ್ರ ಕುಂಜಿತ್ತಾಯ, ಅನಂತಪದ್ಮನಾಭ ಐತಾಳ್, ರಘುಪ್ರಸಾದ್ ಅಡಿಗ ಪೆರ್ಡೂರು, ಜಯಂತ ಐತಾಳ್ ಪೆರ್ಡೂರು, ಬಿ.ರಮಾನಂದ ಭಟ್, ನಾರಾಯಣ ಪೂಜಾರಿ ಪೆರ್ಡೂರು, ವಿಠಲ ಶೆಟ್ಟಿ, ಸದಾನಂದ ಕುಲಾಲ್, ವಾಸುದೇವ ಕೃಷ್ಣ ನಾಯಕ್, ವಿಶ್ವ ಪ್ರದಾಪ ಶೆಟ್ಟಿ ಭಾಗವಹಿಸುವರು.

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರು ತಮ್ಮ ಶಕ್ತಾನುಸಾರ ದೇಣಿಗೆ ನೀಡಲು ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೇಣಿಗೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದು, ದೇಣಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಜೀರ್ಣೋದ್ಧಾರ ಕಾರ್ಯದಲ್ಲಿ ಭಕ್ತರ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸ್ಮಾರ್ಟ್ ಕಾರ್ಡ್ ಮೂಲಕ ಭಕ್ತರು ತಮ್ಮ ದೇಣಿಗೆಯನ್ನು ಸುಲಭವಾಗಿ ನೀಡಬಹುದಾಗಿದೆ. ಸಂಗ್ರಹವಾಗುವ ದೇಣಿಗೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿಯೇ ಬಳಸಲಾಗುವುದು. ಇದರಿಂದ ದೇಣಿಗೆ ಸಂಗ್ರಹಣೆಯಲ್ಲಿ ವ್ಯವಸ್ಥಿತ ನಿರ್ವಹಣೆ ಹಾಗೂ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಲಿದೆ. ಅಗತ್ಯವಿರುವ ಭಕ್ತರಿಗೆ ಸ್ಮಾರ್ಟ್ ಕಾರ್ಡ್‌ನೊಂದಿಗೆ ಕಾಣಿಕೆ ಹುಂಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.