ಮಂಗಳೂರು: ಬಹು ವರುಷಗಳ ಹೋರಾಟದ ಫಲವಾಗಿ ತುಳುವಿಗೆ ಅಧಿಕೃತ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನವನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಲ್ಪಿಸಿದ್ದಕ್ಕೆ ಬೆಂಗಳೂರು ತುಳು ಕೂಟದ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ ಸಂತಸ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳಿಗನ್ನು ಗೌರವಿಸಿದ್ದಾರೆ.

ಸರಕಾರ ಮಾನ್ಯತೆ ನೀಡಿದ ಸೆ.೧೮ರ ದಿನಾಂಕವನ್ನು ವಿಶ್ವ ತುಳು ದಿನ ಅಥವಾ ಅದೇ ದಿನದಂದು ತುಳು ಪರ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ, ಒಂದನೇ ತರಗತಿಯಿಂದ ಶಾಲೆಗಳಲ್ಲಿ ತುಳು ಕಲಿಕೆಗೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.