ತಡರಾತ್ರಿ ಸುರಿದ ಮಳೆ..

ಮೂಡುಬಿದಿರೆ: ಪರಿಸರದಲ್ಲಿ ತಡರಾತ್ರಿ ಮಳೆ ಸುರಿದಿದೆ. ೨.೪೫ಕ್ಕೆ ಸರಿಯಾಗಿ ಮಳೆಯಾಗಿದೆ. ಸುಮಾರು ಅರ್ಧ ತಾಸುಗಳ ಕಾಲ ಮಳೆ ಸುರಿದಿದ್ದು, ಇಳೆಗೆ ತಂಪಾಗಿಸಿದೆ.

ಜಾಹೀರಾತು

ಗುಡುಗು ಸಿಡಿಲಾರ್ಭಟಗಳಿಲ್ಲದೆ, ನಿರಂತರ ಮಳೆಯಾಗಿದೆ. ಬೆಳಗ್ಗಿನ ಜಾವದ ತನಕವೂ ಸಣ್ಣ ಹನಿಗಳು ಬೀಳುತ್ತಿದ್ದವು. ಮಂಗಳವಾರ ದಿನಪೂರ್ತಿ ಮೋಡಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಗುಡುಗು ಸಿಡಿಲಾರ್ಭಟಗಳಿದ್ದವು. ಆದರೆ ಮಳೆ ಸುರಿದಿರಲಿಲ್ಲ. ಇದೀಗ ಕಳೆದ ಒಂದು ವಾರದಲ್ಲಿ ಎರಡನೇ ಮಳೆಯಾಗಿದೆ.

Share

Leave a Reply

Your email address will not be published. Required fields are marked *