ಮೂಡುಬಿದಿರೆಯಲ್ಲಿ ಸಂಭ್ರಮದ ನವರಾತ್ರಿ ವೈಭವ

ಮೂಡುಬಿದಿರೆ: ತಾಲೂಕಿನಾದ್ಯಂತ ಸಂಭ್ರಮದ ನವರಾತ್ರಿ ಉತ್ಸವ ಆರಂಭಗೊಂಡಿತು. ಬೆಳಗ್ಗೆಯೇ ಮೂಡುಬಿದಿರೆಯ ದೇವೀ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭತ್ತದ ತೆನೆಯ ವಿತರಣೆ ಕಾರ್ಯಕ್ರಮಗಳು ನಡೆದವು. ಭಕ್ತಾಧಿಗಳು ಬೆಳಗ್ಗಿನಿಂದಲೇ ಧಾರ್ಮಿಕ ಕ್ಷೇತ್ರಕ್ಕೆ ಭೇಟಿನೀಡುವ ದೃಶ್ಯ ಕಂಡು ಬಂತು.
ಮೂಡುಬಿದಿರೆಯ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ, ರೇಣುಕಾ ಎಲ್ಲಮ್ಮ ದೇವಸ್ಥಾನ, ಮಾರಿಗುಡಿ, ಗೌರಿ ದೇವಸ್ಥಾನ, ಚಾಮುಂಡೇಶ್ವರೀ ಕ್ಷೇತ್ರ, ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ, ಮೂಡುವೇಣುಪುರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆದವು.


ಮನೆ ಮನೆಗಳಲ್ಲೂ ನವರಾತ್ರಿಯ ಮೊದಲ ದಿನದ ಉತ್ಸವಾಚರಣೆಗಳು ಸಂಭ್ರಮದಿಂದ ನಡೆದವು.
ದಸರಾ ಆಚರಣೆ: ಮೂಡುಬಿದಿರೆ ಸಮಾಜಮಂದಿರ ಸಭಾದ ಆಶ್ರಯದಲ್ಲಿ ೭೯ನೇ ದಸರಾ ಉತ್ಸವ ಆರಂಭಗೊಂಡಿತು. ಗುರುವಾರದ ತನಕ ವಿವಿಧ ಸಾಂಸ್ಕೃತಿಕ, ಹಾಗೂ ಉಪನ್ಯಾಸ ಮಾಲಿಕೆ ನಡೆಯಲಿದೆ.

Share

Leave a Reply

Your email address will not be published. Required fields are marked *