ಬೆಂಗಳೂರು: ತಲೆಗೆ ಸುರಿದದ್ದು ಕಾಲಿಗೆ ಬರಲೇ ಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬAತಾಯ್ತು ಸಿಎಂ ಸಿದ್ದರಾಮಯ್ಯ ಕಥೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರವಿದ್ದಾಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ದಿನಂಪ್ರತಿ ವಾಗ್ಧಾಳಿ ನಡೆಸುತ್ತಲೇ ಬಂದಿದ್ದರು. ಇದೀಗ ಬಿಜೆಪಿಯ ಸರದಿ ಆರಂಭವಾಗಿದೆ. ಕಾಂಗ್ರೆಸ್ ಧೋರಣೆಯನ್ನು ಇಂಚಿAಚಾಗಿ ಖಂಡಿಸತೊಡಗಿದೆ.
ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಪರಿಹಾರ ನೀಡಿಕೆ ವಿಚಾರದಲ್ಲಿ ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದನ್ನು ಬಿಜೆಪಿ ಸಾಮಾಜಿಕ ಮಾಧ್ಯಮದ ಮೂಲಕ ಖಂಡಿಸಿ ವಾಗ್ಧಾಳಿ ನಡೆಸಿದೆ. ಬರ ಪೀಡಿತ ಭೂಮಿಯ ಚಿತ್ರದ ಮಾದರಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಪ್ರಕಟಿಸಿ, ‘ಬರ ಗ್ಯಾರಂಟಿ ಸಿಎಂ’ ಎಂಬ ಅಡಿಬರಹ ನೀಡಿ ವ್ಯಂಗ್ಯವಾಡಿದೆ. ‘ಕಾಂಗ್ರೆಸ್ ಬಂದಿದೆ ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ, ಹನಿ ನೀರಿಗೂ ಹಾಹಾಕಾರ ಶುರುವಾಗಿದೆ’ ಎಂದು ಬಿಜೆಪಿ ಉಲ್ಲೇಖಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ.