ಬೆಂಗಳೂರು: ಜಾನಪದ ಕ್ರೀಡೆ ಕಂಬಳ ರಾಜಧಾನಿಯಲ್ಲಿ ನಡೆಯುತ್ತದೆ ಎಂಬುದೇ ದೊಡ್ಡ ಸುದ್ದಿಯಾಗಿತ್ತು. ಆದರೆ ಕೋಣಗಳ ಮಾಲಕರು ಬೆಂಗಳೂರು ಕಂಬಳಕ್ಕೆ ಕೋಣ ಕಳುಹಿಸುವುದು ಕಷ್ಟ ಎನ್ನುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಕಂಬಳ ನಡೆಯುವುದೇ ಸಂಶಯ ಎಂಬAತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕೆ ಸಿದ್ಧತೆಗಳೂ ನಡೆಯುತ್ತಿದೆ. ಕೋಣಗಳ ಮಾಲಕರಿಗೆ ಬೆಂಗಳೂರು ಕಂಬಳ ನುಂಗಲಾರದ ತುತ್ತಾಗಿದ್ದು ಬಹು ನಿರೀಕ್ಷೆಯ ಕಂಬಳ ನಡೆಯುತ್ತದೋ ಇಲ್ಲವೋ ಎಂಬ ಚಿಂತೆ ಉಂಟಾಗಿದೆ. ಕರಾವಳಿಯ ವಾತಾವರಣಕ್ಕೆ ಕೋಣಗಳು ಹೊಂದಿಕೊAಡಿವೆ. ಸುಮಾರೂ ಮುನ್ನೂರೈವತ್ತು ಕಿಲೋಮೀಟರ್ ದೂರ ಕೋಣಗಳನ್ನು ಕರೆದುಕೊಂಡು ಹೋಗುವುದೂ ಒಂದು ದೊಡ್ಡ ಸವಾಲು. ಕೋಣಗಳಿಗೆ ಆರೋಗ್ಯ ಸಮಸ್ಯೆ ಬಂದರೆ ಬಹಳ ಕಷ್ಟ. ಈ ಎಲ್ಲಾ ಕಾರಣಗಳಿಂದಾಗಿ ಕಂಬಳ ಕೋಣಗಳನ್ನು ಬೆಂಗಳೂರಿಗೆ ಕರೆದೊಯ್ಯಲು ಮಾಲಕರು ಹಿಂದೇಟು ಹಾಕುತ್ತಿದ್ದಾರೆಂಬ ಮಾತು ಬಲವಾಗಿ ಕೇಳಲಾರಂಭಿಸಿವೆ.