ತೆಂಗಿನ ತೋಟ ಸೇರಿದಂತೆ, ನೈಸರ್ಗಿಕ ಕಾಡಿಗೆ ಬೆಂಕಿ: ಅಪಾರ ಹಾನಿ

ಮೂಡುಬಿದಿರೆ: ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡ ರಸ್ತೆಯ ಸಮೀಪದಲ್ಲಿ ತೆಂಗಿನ ತೋಟವೂ ಸೇರಿದಂತೆ ನೈಸರ್ಗಿಕ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದೊಡ್ಡ ಪ್ರಮಾಣದಲ್ಲಿ ಹೊತ್ತಿ ಉರಿದಿದೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಕೋಡಂಗಲ್ಲು ಪರಿಸರದಲ್ಲಿ ಮಧ್ಯಾಹ್ನ ೧೧.೩೦ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದರು.

ಅದೇ ಬೆಂಕಿ ಪಕ್ಕದ ಕೀರ್ತಿನಗರದ ತನಕವೂ ಮುಂದುವರಿದಿದ್ದು, ರಾತ್ರಿ ಏಳೂವರೆಯ ತನಕವೂ ಹೊತ್ತಿ ಉರಿದಿದೆ. ಇದರಿಂದಾಗಿ ಅನೇಕ ಮರಗಿಡಗಳು ಬೆಂಕಿಗೆ ಆಹುತಿಯಾಗಿದೆ. ಪರಿಸರದಲ್ಲಿದ್ದ ತೆಂಗಿನ ತೋಟಕ್ಕೂ ಬೆಂಕಿ ತಗುಲಿದ್ದು, ತೋಟದ ತುಂಬೆಲ್ಲಾ ಬೆಂಕಿ ಪಸರಿಸಿಕೊಂಡಿದೆ.
ಮನೆಗಳಿರುವ ಬಡಾವಣೆಯ ಮತ್ತೊಂದು ಭಾಗದಲ್ಲಿ ನೈಸರ್ಗಿಕ ಕಾಡಿದ್ದು, ಆಕಸ್ಮಿಕ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ರಾತ್ರಿಯ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ.

Share

Leave a Reply

Your email address will not be published. Required fields are marked *