ಮೂಡುಬಿದಿರೆ: ಉಡುಪಿ ಕಾಸರಗೋಡು ೪೦೦ಕೆ.ವಿ. ಪವರ್ ಲೈನ್‌ಗಾಗಿ ಭೂಮಿ ನೀಡಿದ ಸಂತ್ರಸ್ಥರನ್ನು ಗುರುತಿಸಿ ಗೌರವಿಸಿದ ವಿನೂತನ ಕಾರ್ಯಕ್ರಮ ಗಣರಾಜ್ಯೋತ್ಸವದಂದು ಮೂಡುಬಿದಿರೆಯಲ್ಲಿ ನಡೆಯಿತು.
ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ `ಯಶಕರ್ನಾಟಕ’ಸಮೂಹ ಈ ಕಾರ್ಯಕ್ರಮ ಮಾಡಿದೆ. `ವನ್ ಗ್ರಿಡ್ ವನ್ ನೇಷನ್’ ಎಂಬ ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆ ಇದಾಗಿದೆ. ತಲತಲಾಂತರಗಳಿAದ ಕೃಷಿ ಮಾಡುತ್ತಾ, ಭಾವನಾತ್ಮಕ ಸಂಬAಧವನ್ನು ಭೂಮಿಯೊಂದಿಗೆ ಹೊಂದಿದ್ದರೂ, ಯೋಜನೆಯ ಅನುಷ್ಠಾನಕ್ಕಾಗಿ ಭೂಮಿ ನೀಡುವ ಮೂಲಕ ಮಾದರಿಯಾದವರನ್ನು ಗುರುತಿಸಿ ಗೌರವಿಸಿ, ಪ್ರಗತಿಗೆ ತಮ್ಮ ಕೊಡುಗೆ ನೀಡಿದ್ದನ್ನು ಪರಿಗಣಿಸಿ ಗೌರವಿಸಿ ಸನ್ಮಾನಿಸಿದೆ. ನೆಲ-ಜಲಕ್ಕಾಗಿ ಹೋರಾಟ ಮಾಡಿದ ಮಹನೀಯರನ್ನು ಗೌರವಿಸುವ ಕಾರ್ಯ ಮಾಡಿದೆ.
ಕೃಷಿಕರ ನೋವು ನಲಿವುಗಳು, ಕೃಷಿಕರ ಮುಂದಿರುವ ಸವಾಲುಗಳನ್ನು ಕುರಿತ ಉಪನ್ಯಾಸ ಕಾರ್ಯಕ್ರಮ, ಜೊತೆಗೆ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮೂಡಿಬಂತು.
ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ: ಈ ರೀತಿಯ ವಿನೂತನ ಹಾಗೂ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೃಷಿಕರು, ಸಂತ್ರಸ್ಥರು,ಹೋರಾಟಗಾರರು ಹಾಗೂ ಊರ ಗಣ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ವಿಭಿನ್ನ ಕಾರ್ಯಕ್ರಮ, ಕೃಷಿಕರಿಗೆ ದನಿಯಾಗುವ ಈ ಕಾರ್ಯಕ್ರಮ ಒಂದು ಹೊಸ ಪ್ರಯತ್ನವಾಗಿದೆ ಎಂದು ಪ್ರಶಂಸಿಸಿದ್ದಾರೆ.