ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕಡಲಕೆರೆಯಲ್ಲಿ ಶನಿವಾರ ೨೩ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಆರಂಭಗೊoಡಿತು. ಶಾಸಕ ಉಮಾನಾಥ ಎ ಕೋಟ್ಯಾನ್ ನೇತೃತ್ವದಲ್ಲಿ ಆಯೋಜಿಸಿದ ಕಂಬಳವನ್ನು ವೇ.ಮೂ ಈಶ್ವರ ಭಟ್, ವಂ.ಫಾ ಮೆಲ್ವಿನ್ ನೊರೊನ್ನಾ ಪುತ್ತಿಗೆ, ಮೌಲಾನಾ ಝೀಯಾವುಲ್ಲಾ ಹಕ್ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಪರಂಪರೆಯನ್ನು ಉಳಿಸುವ ಕೆಲಸಗಳು ಈ ಕಂಬಳ ಕೂಟದ ಮೂಲಕ ನಡೆಯುವಂತಾಗಲಿ. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೂ ಶುಭವಾಗಲಿ ಎಂದರು.


ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ನ್ಯಾಯವಾದಿ ಶ್ವೇತಾ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಉದ್ಯಮಿ ತಿಮ್ಮಯ ಶೆಟ್ಟಿ, ಧನಕೀರ್ತಿ ಬಲಿಪ, ಕಂಬಳ ಸಮಿತಿ ಕೋಶಾಧಿಕಾರಿ ಭಾಸ್ಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರುಗಳು, ಉದ್ಯಮಿ ಶ್ರೀಪತಿ ಭಟ್, ಮೇಘನಾಥ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ರಾಣಿ ಅಬ್ಬಕ್ಕ ದೇವಿಯ ಶೌರ್ಯ ಹಾಗೂ ತುಳುನಾಡಿನ ಇತಿಹಾಸದ ಕುರಿತು ಖ್ಯಾತ ವಾಗ್ನಿ ಶ್ರೀಕಾಂತ್ ಶೆಟ್ಟಿ ಉಪನ್ಯಾಸ ನೀಡಿದರು. ಈ ಸಂದರ್ಭ ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆಯವರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಂಬಳ ಸಮಿತಿ ಪ್ರಮುಖರಾದ ರಂಜಿತ್ ಪೂಜಾರಿ ತೋಡಾರು, ಸುರೇಶ್ ಕೆ. ಪೂಜಾರಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಹಾಗೂ ಕಂಬಳ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಮರ್ ಕೋಟೆಗೆ ಕಂಬಳ ಸಮಿತಿಯ ಸನ್ಮಾನ
ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ ದೇವಿಯ ಕುರಿತ ನಿರಂತರ ಅಭಿಯಾನದ ರೂವಾರಿ, ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆ ಅವರನ್ನು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಂಬಳದ ಉದ್ಘಾಟನೆ ಹಾಗೂ ರಾಣಿ ಅಬ್ಬಕ್ಕ ದೇವಿಯ ೫೦೦ನೇ ಜನ್ಮ ವರ್ಷಾಚರಣೆ ಕಾರ್ಯಕ್ರದಲ್ಲಿ ಈ ಗೌರವ ನೀಡಲಾಯಿತು.

ಶಾಸಕ ಉಮಾನಾಥ ಎ ಕೋಟ್ಯಾನ್ ನೇತೃತ್ವದಲ್ಲಿ ನಡೆದ ೨೩ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸನ್ಮಾನ ನಡೆಯಿತು. ಮೂಡುಬಿದಿರೆಯ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಕಂಬಳ ನಡೆಯುವ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ದೇವಿಯ ಭಾವಚಿತ್ರ ಇರಿಸಿ ಗೌರವ ಸೂಚಿಸಿರುವುದು, ಮಣ್ಣಿನ ಮಗಳ ಪುತ್ಥಳಿ ನಿರ್ಮಾಣದಲ್ಲಿ ಪ್ರಮುಖ ಕಾರ್ಯನಿರ್ವಹಿಸಿರುವುದು, ಅಬ್ಬಕ್ಕ ಸಂಸ್ಮರಣೆ, ೫೦೦ಮಂದಿಗೆ ಅಬ್ಬಕ್ಕ ಪ್ರೇರಣಾ ಪತ್ರ ನೀಡಿರುವುದು ಹೀಗೆ ಅಬ್ಬಕ್ಕನ ವಿಚಾರದಲ್ಲಿ ನಿರಂತರ ಕಾರ್ಯಕ್ರಮ ರೂಪಿಸುತ್ತಾ, ಮಣ್ಣಿನ ಮಗಳಿಗೆ ಸೂಕ್ತ ನ್ಯಾಯ ನೀಡುವಲ್ಲಿ ಮುತುವರ್ಜಿ ವಹಿಸಿರುವುದನ್ನು ಗುರುತಿಸಿ ಈ ಸನ್ಮಾನ ನೀಡಿರುವುದು ಅಭಿನಂದನಾರ್ಹವಾಗಿತ್ತು.
ವೀರರಾಣಿ ಅಬ್ಬಕ್ಕದೇವಿಯ ೫೦೦ನೇ ಜನ್ಮ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಅಬ್ಬಕ್ಕ ಮಾತೆಗೆ ಮಾಲಾರ್ಪಣೆಮಾಡಿ, ಪುಷ್ಪಾರ್ಚನೆಯೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ವಾಗ್ಮಿ ಶ್ರೀಕಾಂತ್ ಶೆಟ್ಟಿ ರಾಣಿ ಅಬ್ಬಿಕ್ಕ ದೇವಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್ ಸೇರಿದಂತೆ ಕಂಬಳ ಸಮಿತಿಯ ಪದಾಧಿಕಾರಿಗಳು ಗಣ್ಯರು ಇದ್ದರು.

 

Share

Leave a Reply

Your email address will not be published. Required fields are marked *