ಗುಡ್ ನ್ಯೂಸ್! ಮಂಗಳೂರು ಹಳಿಯಲ್ಲಿನ್ನು ವಂದೇ ಭಾರತ್!

ಮಂಗಳೂರು: ವಂದೇಭಾರತ್ ರೈಲು ಮಂಗಳೂರು ಹಳಿಗಳಲ್ಲಿ ಸಂಚರಿಸುವ ದಿನ ದೂರವಿಲ್ಲ. ಭಾರೀ ಜನಪ್ರಿಯತೆ ಪಡೆದ ಈ ರೈಲು ಮಂಗಳೂರಲ್ಲೂ ಸಂಚರಿಸಲಿದೆ. ಸೆಮಿ ಹೈಸ್ಪೀಡ್ ಎಕ್ಸ್ಪ್ರೆಸ್ ರೈಲನ್ನು ಪ್ರಯಾಣಿಕರು ಸಾಕಷ್ಟು ಮೆಚ್ಚಿಕೊಂಡಿದ್ದು ಎಲ್ಲೆಡೆಯಿಂದ ಭಾರೀ ಬೇಡಿಕೆ ಬರಲಾರಂಭಿಸಿದೆ. ಈ ಕಾರಣದಿಂದಲೇ ರೈಲ್ವೆ ಸಚಿವಾಲಯವೂ ವಂದೇಭಾರತ್ ರೈಲು ಸೇವೆಯನ್ನು ವಿಸ್ತರಿಸಲು ಚಿಂತಿಸಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಮೂರು ಪಿಟ್ ಲೈನ್‌ಗಳಲ್ಲಿ ಒಂದರಲ್ಲಿ ಓರ‍್ಹೆಡ್ ಎಲೆಕ್ಟಿçಕಲ್ ಉಪಕರಣಗಳನ್ನು ಒದಗಿಸುವ ಮೂಲಕ ವಂದೇ ಭಾರತ್ ರೇಕ್‌ಗಳನ್ನು ನಿರ್ವಹಿಸಲು ಸಜ್ಜಾಗಿದೆ. ಯಾಂತ್ರಿಕ ಮತ್ತು ವಿದ್ಯುತ್ ತಪಾಸಣೆ, ದುರಸ್ತಿ ಮತ್ತು ಇತರ ಪ್ರಮುಖ ಕೆಲಸಗಳನ್ನು ಒಳಗೊಂಡAತೆ ಪ್ರಾಥಮಿಕ ನಿರ್ವಹಣೆ ಕೆಲಸ ಮಾಡಲಾಗುತ್ತಿದೆ. ಕೋಚ್‌ಗಳನ್ನು ತೊಳೆಯಲು ನೀರನ್ನು ಬಳಸುವುದರಿಂದ ಯಾವುದೇ ಸಂಭವನೀಯ ವಿದ್ಯುತ್ ಅವಘಡವನ್ನು ತಪ್ಪಿಸಲು ಪಿಟ್ ಲೈನ್‌ಗಳಲ್ಲಿ ವಿದ್ಯುತ್ ಎಳೆತವನ್ನು ಬಳಸಲಾಗುವುದಿಲ್ಲ ಎಂದು ರೈಲ್ವೇ ಇಲಾಖೆ ಹೇಳಿದೆ.

Share

Leave a Reply

Your email address will not be published. Required fields are marked *