ಮೂಡುಬಿದಿರೆ: ಅಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಇದರ ಆಶ್ರಯದಲ್ಲಿ ಧವಳತ್ರಯ ಜೈನಕಾಶಿ ಟ್ರಸ್ಟ್ ಮೂಡುಬಿದಿರೆ ಇದರ ಸಹಯೋಗದೊಂದಿಗೆ ಜೈನಮಠದಲ್ಲಿ ಸ್ವಾತಂತ್ರ್ಯೋತ್ಸವ ತಾಳಮದ್ದಲೆ ಆಗಸ್ಟ್ ೧೫ರ ಅಪರಾಹ್ನ ೩.೩೦ಕ್ಕೆ ನಡೆಯಲಿದೆ. ಭಾರತಭೂಷಣ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಉದ್ಯಮಿ ಕೆ ಶ್ರೀಪತಿ ಭಟ್ಟ ಉದ್ಘಾಟಿಸುವರು. ಭುಜಬಲಿ ಧರ್ಮಸ್ಥಳ, ಯೋಗೀ ಪಿ ಸುಧಾಕರ ತಂತ್ರಿಗಳು, ರಾಘವೇಂದ್ರ ಭಂಡಾರ್ಕಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸಂಘಟನೆಯ ಸಂಸ್ಥಾಪಕ ವಿದ್ವಾನ್ ಡಾ ವಿನಾಯಕ ಭಟ್ ಗಾಳಿಮನೆ ತಿಳಿಸಿದ್ದಾರೆ.