ಮೂಡುಬಿದಿರೆ: ವನಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಗಿಡ ನೆಟ್ಟು ಪೋಷಿಸಿ ಪರಿಸರ ಉಳಿಸಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಹಸಿರು ಇದ್ದರೆ ಉಸಿರು. ಹಸಿರು ಇಲ್ಲವಾದಲ್ಲಿ ಜೀವನ ದುಸ್ತರವಾಗಬಹುದು ಎಂದು ದ ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು. ಅವರು ಭಾನುವಾರ ಸರಕಾರಿ ಪ್ರೌಢ ಶಾಲೆ ಪ್ರಾಂತ್ಯದಲ್ಲಿ ಗೃಹರಕ್ಷಕ ದಳ ಮೂಡಬಿದಿರೆ ಘಟಕದಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳೂರು ಘಟಕದ ಗೃಹರಕ್ಷಕರಾದ ದಿವಾಕರ, ಸುನೀಲ್ ಹಾಗೂ ಪ್ರಾಂತ್ಯ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಚಂದ್ರ ನಾಯ್ಕ, ಶಿಕ್ಷಕಿ ಮಮತ, ಶಾಲಾ ವಿದ್ಯಾರ್ಥಿಗಳು ಹಾಗೂ ಮೂಡುಬಿದಿರೆ ಗೃಹರಕ್ಷಕ ದಳದ ಘಟಕಾಧಿಕಾರಿ ಪಾಂಡಿರಾಜ್ ಉಪಸ್ಥಿತರಿದ್ದರು. ಸುಮಾರು ೨೫ ಹಣ್ಣಿನ ಗಿಡಗಳನ್ನು ನೆಡಲಾಯಿತು.