ಮಂಗಳೂರು: ಹೈದರಾಬಾದ್‌ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬ0ಧಿಸಿದ0ತೆ ಎನ್ ಐ ಎ ಪೊಲೀಸರು ಬಂಟ್ವಾಳದ ಎರಡು ಮನೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಐದು ಮನೆಗಳಿಗೆ ರವಿವಾರ ದಾಳಿ ನಡೆಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಹಾಗೂ ಕುಂಪಣಮಜಲು ನಿವಾಸಿಯಾಗಿದ್ದ ಪ್ರಸ್ತುತ ವಳಚ್ಚಿಲ್ ನಿವಾಸಿಯಾಗಿರುವ ಮುಸ್ತಾಕ್ ಎಂಬವರ ಮನೆಗೆ ದಾಳಿ ನಡೆಸಿದ ಎನ್‌ಐಎ ಪೋಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.