ಮೂಡುಬಿದಿರೆ: ಶ್ರೀ ಕೃಷ್ಣ ಜನ್ಮೋತ್ಸವದ ಅಂಗವಾಗಿ ಮೂಡುಬಿದ್ರೆ ಮೊಸರು ಕುಡಿಕೆಯ ಸಂದರ್ಭದಲ್ಲಿ ಜವನೆರ್ ಬೆದ್ರ ಸಂಘಟನೆಯಿಂದ ಕೃಷ್ಣೋತ್ಸವ 2023 ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು ,
ಇದರ ಪ್ರಥಮ ಆಮಂತ್ರಣ ಪತ್ರವನ್ನು ಮೂಡುಬಿದ್ರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ದೇವರಿಗೆ ಸಮರ್ಪಿಸಲಾಯಿತು.
ನಂತರ ದೇಗುಲದ ಮುಖ್ಯಸ್ಥರಾದ ಗುರುಪ್ರಸಾದ್ ರಾವ್ ಅವರು ಪೋಸ್ಟರ್ ಬಿಡುಗಡೆ ಮಾಡಿದರು, ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ, ಸಂಚಾಲಕರಾದ ನಾರಾಯಣ ಪಡುಮಲೆ, ಪ್ರಮುಖರಾದ ಸಂಪತ್ ಪೂಜಾರಿ, ಪ್ರತಿಶ್ ಗಾಂಧಿನಗರ, ರಾಜೇಶ್ ಕೆಲ್ಲಪುತ್ತಿಗೆ ಇದ್ದರು.