ಧರ್ಮವಿಭಜನೆಯ ವಾಸನೆ | ಹಲವು ಸ್ಫೋಟಕ ಮಾಹಿತಿ | ಮಿಷನರಿಗಳ ಕೈವಾಡ?

ಭಾಗ -೨

ಎಚ್ಚರ ಹಿಂದುಗಳೇ…ಎಚ್ಚರ

ಮಂಗಳೂರು: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಮುಗಿಯದ ಕಗ್ಗಂಟಾಗಿದೆ. ದಿನ ದಿನವೂ ಪ್ರಕರಣಕ್ಕೆ ಹೊಸ ಹೊಸ ತಿರುವು ಲಭ್ಯವಾಗುತ್ತಿದೆ. ಇದೀಗ ಸೌಜನ್ಯ ಮಾವ ವಿಠಲ ಗೌಡರು ಖಾಸಗೀ ವಾಹಿನಿಗೆ ನೀಡಿದ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ದೊಡ್ಡ ತಿರುವು ನೀಡಿದ್ದು, ಈ ಪ್ರಕರಣವನ್ನು ಮುಂದಿಟ್ಟು ದೊಡ್ಡ ಷಡ್ಯಂತ್ರವೊಂದು ನಡೆಯುತ್ತಿದೆಯೇ ಎಂಬ ಸಂದೇಹಕ್ಕೆ ಕಾರಣವಾಗಿದೆ. ಆರೋಪಿಗಳ ವಿಚಾರದಲ್ಲಿ ಅವರು ಹೇಳಿಕೆ ನೀಡಿದ್ದು ಒಂದಾದರೆ, ಅದೆಲ್ಲದಕ್ಕೂ ಮಿಗಿಲಾಗಿ ನೀಡಿದ ಮತ್ತೊಂದು ಹೇಳಿಕೆ ಈ ಭೀಕರ ಸತ್ಯವನ್ನು ಹೊರಹಾಕುತ್ತಿದೆ. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ವಿರೋಧಿಸಲು ಜಿಲ್ಲೆಯ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ವಿಫಲವಾಗಿವೆ. ಹೊರಭಾಗದ, ಹೊರ ಜಿಲ್ಲೆಯ ಸಂಘಟನೆಗಳು ಸಹಕಾರ ನೀಡಿದೆ ಎಂದಿದ್ದಾರೆ. ಯೆಸ್‌ ಇದೇ ನೋಡಿ ಪ್ರಮುಖ ವಿಚಾರ! ಪಾಯಿಂಟ್‌ ಶುಡ್‌ ಬಿ ನೋಟೆಡ್!.‌
ಮೈಸೂರು, ಸೇರಿದಂತೆ ಇತರೆ ಜಿಲ್ಲೆಗಳ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿವೆ ಎಂದಿದ್ದಾರೆ ಸೌಜನ್ಯ ಅವರ ಮಾವ ವಿಠಲ ಗೌಡರು. ಖಂಡಿತಾ. ಇಡೀ ತಾಲೂಕು, ಜಿಲ್ಲೆ, ರಾಜ್ಯದ ಪ್ರತಿಯೊಬ್ಬರ ಮನದಾಳದಲ್ಲಿ ಅಂದೂ, ಇಂದೂ, ಎಂದೆಂದೂ ಇರುವುದು ಸೌಜನ್ಯ ಹೀನಾಯ ಸಾವಿಗೆ ನ್ಯಾಯ ಸಿಗಬೇಕೆಂಬುದೇ ಆಗಿದೆ. ಇಲ್ಲಿ ಆರೋಪಿ ಯಾರು ಎಂಬುದಷ್ಟೇ ವಿಚಾರ!. ಸುಖಾ ಸುಮ್ಮನೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಸೊಲ್ಲೆತ್ತುವುದು, ಅವಹೇಳನೆ ಮಾಡುವುದನ್ನು ಸಮಸ್ತ ಹಿಂದುಗಳು ಎಂದಿಗೂ ಸಹಿಸುವುದಿಲ್ಲ. ಪ್ರಕರಣದ ಹೆಸರಿನಲ್ಲಿ ನಡೆಯುವ ಷಡ್ಯಂತ್ರಗಳನ್ನು ಹಿಂದುಗಳು ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಅನೇಕ ಮಂದಿ ಹೋರಾಟಕ್ಕೆ ಮೌನವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಸೌಜನ್ಯ ಅವರ ಮಾವ ವಿಠಲ ಗೌಡ ಹೇಳುತ್ತಾರೆ ಮುಸ್ಲಿಂ ಸಂಘಟನೆ ಎಸ್‌ಡಿಪಿಐ ಬೆಂಬಲಿಸಿದೆ, ಕಮ್ಯೂನಿಸ್ಟ್‌ ಸಂಘಟನೆ ಬೆಂಬಲಿಸಿದೆ, ಒಡನಾಡಿ ಸಂಘಟನೆ ಬೆಂಬಲಿಸಿದೆ ಎಂಬುದಾಗಿ!. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ವಿಚಾರಗಳಲ್ಲಿ ಈ ಸಂಘಟನೆಗಳು ನಿರಂತರ ದ್ವೇಷ ರಾಜಕಾರಣ ಮಾಡುತ್ತಿರುವುದು ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಮಠ, ಮಂದಿರಗಳ ವಿಚಾರದಲ್ಲಿ ಅನಾವಶ್ಯಕವಾಗಿ ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಪ್ರಹಾರ ಮಾಡುತ್ತಿರುವುದು ಇದೇ ಸಂಘಟನೆ. ಇಂತಹ ಸಂಘಟನೆ ಸೌಜನ್ಯ ಪ್ರಕರಣಕ್ಕೆ ಬೆಂಬಲ ನೀಡಿದ್ದಾರೆ ಎಂದಾದರೆ ಒಮ್ಮೆ ಪ್ರಜ್ಞಾವಂತ ನಾಗರೀಕರು ಗಂಭೀರವಾಗಿ ಚಿಂತಿಸಲೇ ಬೇಕಾಗಿದೆ. ಲಕ್ಷಾಂತರ ಭಕ್ತಾಧಿಗಳ ಶ್ರದ್ಧಾಕೇಂದ್ರವಾದ ಕೇರಳದ ಶಬರಿಮಲೆ ಪ್ರವೇಶ ವಿಚಾರದಲ್ಲಿ ಹೋರಾಡಿದ್ದು ಯಾರು ಎಂಬುದನ್ನೊಮ್ಮೆ ನೋಡಿ, ಅದೇ ವ್ಯಕ್ತಿ ಸೌಜನ್ಯ ಹೋರಾಟದಲ್ಲಿದ್ದಾರೆ!. ಹಿಂದೂ ಧರ್ಮನಾಯಕ ಯೋಗಿ ಆದಿತ್ಯನಾಥ್‌ ಮೇಲೆ ಅಪಪ್ರಚಾರವೆಸಗಿದ್ದ, ಧಾರ್ಮಿಕ ಕೇಂದ್ರವೊಂದರ ಮೇಲೆ ಅಪಪ್ರಚಾರ ಮಾಡುತ್ತಿರುವ ಪ್ರಭಾ ಬೆಳವಂಗಲ ಅವರ ಉದ್ದೇಶವೇನು ಎಂಬುದನ್ನು ಗಮನಿಸಲೇಬೇಕು!. ಮುಗ್ಧ ಹುಡುಗಿಗೆ ನ್ಯಾಯಕೊಡಿಸುವ ನೆಪದಲ್ಲಿ ಧಾರ್ಮಿಕ ಕೇಂದ್ರಕ್ಕೆ ಅಪಮಾನ ಮಾಡಲೇಬೇಕೆಂಬ ಅಜೆಂಡಾ ಹೊಂದಿರುವುದು ಎಷ್ಟು ಸರಿ? ಹಿಂದೂಗಳು ಇದೀಗ ಎಚ್ಚರವಾಗಲೇ ಬೇಕಾಗಿದೆ.
ಸೌಜನ್ಯ ಪರ ಮಾತನಾಡುತ್ತಿದ್ದಾನೆಂದು ಕಣ್ಣು ಬಾಯಿ ಬಿಟ್ಟು ಆತನ ಹೇಳಿಕೆ ನೋಡುತ್ತಿರವ ಪ್ರತಿಯೊಬ್ಬರೂ ಗಮನಿಸಲೇ ಬೇಕಾದ ಮತ್ತೊಂದು ಅಂಶವೆಂದರೆ, ಶಿವಮೊಗ್ಗದಲ್ಲಿ ಪಾದ್ರಿಯೊಬ್ಬ ವ್ಯಭಿಚಾರ ಮಾಡುತ್ತಿದ್ದಾಗ ಬಾಯಿಗೆ ಬೀಗ ಜಡಿದುಕೂತಿದ್ದ ಹಿಂದೂ ವಿರೋಧಿ, ಧರ್ಮ ವಿರೋಧಿ ಸ್ಟ್ಯಾನ್ಲಿ ಎಂಬಾತ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ವಿಚಾರ ಮುಂದಿಟ್ಟು ಮಾತನಾಡುತ್ತಿದ್ದಾರೆಂದರೆ!. ಹಿಂದೂ ವಿಚಾರದಲ್ಲಿ ಅನ್ಯ ಧರ್ಮೀಯರಿಗೆ ಯಾಕಿಷ್ಟು ವ್ಯಾಮೋಹ? ಎಡಪಂಥೀಯರೆನಿಸಿಕೊಂಡವರು ಧರ್ಮ ಒಡೆಯುವ ಕಾರ್ಯವನ್ನೇಕೆ ಮಾಡುತ್ತಿದ್ದಾರೆ? ಇವೆಲ್ಲವನ್ನು ಪ್ರಜ್ಞಾವಂತರೊಮ್ಮೆ ಗಮನವಿಟ್ಟು ನೋಡಿಕೊಳ್ಳಿ…ನಾವೆತ್ತ ಸಾಗುತ್ತಿದ್ದೇವೆ…? ನಮ್ಮ ಧರ್ಮನಿಷ್ಠೆ ಎಂತಹುದು ಎಂದು..! ಈ ಎಲ್ಲಾ ಅಂಶವನ್ನಿಟ್ಟು ಇಡೀ ಪ್ರಕರಣವನ್ನವಲೋಕಿಸಿದಾಗ ಮುಗ್ಧ ಹೆಣ್ಣುಮಗಳ ವಿಚಾರದಲ್ಲಿ ಹಿಂದೂಗಳಲ್ಲಿ ದ್ವೇಷ ಮೂಡಿಸುವ, ಹಿಂದೂಗಳನ್ನು ಒಡೆಯುವ, ದಮನಿಸುವ ವ್ಯವಸ್ಥಿತ ಹುನ್ನಾರವೊಂದು ಹಿನ್ನಲೆಯಲ್ಲಿ ಕೆಲಸಮಾಡುತ್ತಿದೆ ಎಂಬ ಅಂಶ ಸ್ಪಷ್ಟವಾಗುತ್ತಿದೆ. ಮನೆ ಮಗಳಿಗೆ ನ್ಯಾಯ ಸಿಗಲೇಬೇಕು. ಆದರೆ ಆಕೆಯ ವಿಚಾರದಲ್ಲಿ ಧರ್ಮವೊಡೆಯುವ ಹೇಯ ಕೃತ್ಯ ಎಂದಿಗೂ ನಡೆಯಬಾರದು. ಹಿಂದೂಗಳನ್ನು ದಮನಿಸುವ, ಧರ್ಮವನ್ನೊಡೆಯುವ, ಒಡೆದಾಳುವ ನೀತಿಯನ್ನು ಮಾಡುವವರ ಬಗ್ಗೆ ಜಾಗೃತರಾಗುವ ಅನಿವಾರ್ಯತೆಯಿದೆ…ಇದು ನಮ್ಮ ಕಾಳಜಿ…ಪ್ರಜ್ಞಾವಂತರ ಕಾಳಜಿಯೂ ಹೌದು.
ಇದು ಇಂದಿನ ವಿಚಾರವಷ್ಟೇ… ಮುಂದೆ ಇನ್ನಷ್ಟು ಸ್ಫೋಟಕ ಮಾಹಿತಿಗಳೊಂದಿಗೆ ನಾವು ನಿಮ್ಮನ್ನು ಭೇಟಿ ಮಾಡುತ್ತೇವೆ….

Share

Leave a Reply

Your email address will not be published. Required fields are marked *