ಇದು ಅಂತ್ಯವಲ್ಲ…ನವಯುಗದ ಆರಂಭದ ಮುನ್ನುಡಿ!
ಮಂಗಳೂರು: ಯೆಸ್…ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು…ಅನ್ಯಾಯವಾಗಿ ಯಾವೊಬ್ಬ ಹೆಣ್ಣುಮಗಳೂ ಸಾಯಬಾರದು. ಇದು ನಮ್ಮ ಸಂಸ್ಕೃತಿಯೂ ಅಲ್ಲ. ಸನಾತನ ಭಾರತೀಯ ಸಂಸ್ಕೃತಿಯಂತೂ ಅಲ್ಲವೇ ಅಲ್ಲ. ನಮ್ಮ ದೇಶದಲ್ಲಿ ಹೆಣ್ಣುಮಗಳಿಗೆ ಪೂಜ್ಯ ಭಾವನೆಯಿದೆ. ಸ್ತ್ರೀಯನ್ನು ತಾಯಿ, ಮಾತೆಯೆಂದು ಪೂಜಿಸುತ್ತೇವೆ. ಆದರೆ ಈ ಹೆಣ್ಣನ್ನೇ ಅಸ್ತ್ರವಾಗಿಸುವುದು ಎಷ್ಟು ಸರಿ? ನ್ಯಾಯದ ಹೆಸರಲ್ಲಿ ಇಂದು ನಡೆಯುತ್ತಿರುವುದೇನು? ಧಾರ್ಮಿಕ ಭಾವನೆಗಳನ್ನೇ ಮುಂದಿಟ್ಟುಕೊಂಡು, ಅದರ ಸೋಗಿನಲ್ಲಿ ಕಾಣದ ಕೈಗಳ ಕೈವಾಡ ನಡೆಯುತ್ತಿದೆಯೇ? ಹಾಗಾದರೆ ಈ ಪ್ರಕರಣದ ಅಸಲಿಯತ್ತೇನು? ಇದೆಲ್ಲವನ್ನೂ ಬಿಡಿ ಬಿಡಿಯಾಗಿ…ಎಳೆ ಎಳೆಯಾಗಿ ಒಂದೊಂದೇ ಹೇಳುತ್ತೇವೆ ನೋಡಿ.
ಯಾವ ಸ್ತ್ರೀಗೆ ಅನ್ಯಾಯವಾಗಿದೆಯೋ ಅದನ್ನು ಯಾವತ್ತೂ ಯಾರೂ ಸಹಿಸಲು ಅಸಾಧ್ಯ. ಸಹಿಸುವುದೂ ಸರಿಯಲ್ಲ. ಆದರೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ʻಕುರುಡು ಕಾಂಚಾಣʼ ಕುಣಿಯುತ್ತಿದೆಯೇ? ಅಥವಾ ಕುರುಡು ಕಾಂಚಾಣಕ್ಕಾಗಿ ಈ ಅಸ್ತ್ರ ಪ್ರಯೋಗಿಸಲ್ಪಡುತ್ತಿದೆಯೋ ಎಂಬ ಸಂದೇಹ ಬಲವಾಗತೊಡಗಿದೆ. ʻಹೇಗಿದ್ದ ಹೇಗಾದ ನೋಡʼ ಎಂಬಂತಹ ಸ್ಥಿತಿ ಅಕ್ಷರಶಃ ಈ ಪ್ರಕರಣದಲ್ಲಿ ಕಂಡು ಬರುತ್ತಿದೆ.
ಪ್ರಕರಣವನ್ನು ಮುಂದಿಟ್ಟುಕೊಂಡು ಒಂದೆಡೆ ಧರ್ಮ ರಾಜಕಾರಣ ಮೆರೆಯುತ್ತಿದ್ದರೆ, ಮತ್ತೊಂದೆಡೆ ಹಣದ ಹೊಳೆ ಹರಿಯುತ್ತಿದೆ. ಇದಕ್ಕೆ ಕಾಣದ ಕೈಗಳ ಕೈವಾಡವಿರುವುದಂತೂ ಸ್ಪಷ್ಟ. ಅಂದು ಬರೀ ಜೋಪಡಿಯಂತಿದ್ದ ವ್ಯವಸ್ಥೆಯೊಂದು ಇಂದು ಐಷಾರಾಮಿ ಬಂಗಲೆಯಾಗಿ ಪರಿವರ್ತನೆಯಾಗಿದೆಯೆಂದರೆ ಅದು ಹೇಗೆ? ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆ ಹರಿದಾಡುತ್ತಿದ್ದು, ಅನೇಕರ ಮನಸ್ಸಿನಲ್ಲಿ ನಿಗೂಢವಾಗಿಯೇ ಇದು ಕೊರೆಯಲಾರಂಭಿಸಿದೆ. ಇದೆಲ್ಲವೂ ವ್ಯವಸ್ಥಿತ ತಂತ್ರ. ಈ ಇಡೀ ಪ್ರಕರಣದ ಹಿಂದೆ ಬೇರೆಯೇ ವ್ಯವಸ್ಥೆಯೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಾ, ಧರ್ಮ ವಿಭಜನೆಗೆ ದಾರಿ ಮಾಡಿಕೊಡುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗುತ್ತಿದೆ. ಇದೆಲ್ಲವನ್ನು ಮುಂದೆ ತಿಳಿಸುತ್ತೇನೆ…
ಇದು ಅಂತ್ಯವಲ್ಲ… ಆರಂಭವಷ್ಟೇ…!