ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಇದರ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಡಾ. ಮಂದಾರ ರಾಜೇಶ್ ಭಟ್ಟ ಆಯ್ಕೆಯಾಗಿದ್ದಾರೆ. ಸ್ಥಳೀಯ ವಾಹಿನಿಯಲ್ಲಿ ಸುದ್ದಿ ನಿರೂಪಕರಾಗಿ, ವಿಶ್ವವಾಣಿ ಪತ್ರಿಕೆಯ ವರದಿಗಾರರಾಗಿ, ಪ್ರಸ್ತುತ ವಿಸ್ಮಯವಾಣಿಯ ದಕ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿರುವ ಮಂದಾರರು ಮೊಲದ ಬಾರಿಗೆ ಜರ್ನಲಿಸ್ಟ್ ಯೂನಿಯನ್ ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಂದಾರ ತ್ಯಾಜ್ಯ ದುರಂತದ ಸಂದರ್ಭದಲ್ಲಿ ನಿರಾಶ್ರಿತರಿಗೆ ಸರಕಾರದಿಂದ ದೊರಕಬೇಕಾದ ಸೌಲಭ್ಯ ಕಲ್ಪಿಸುವಲ್ಲಿ ಮುತುವರ್ಜಿ ವಹಿಸಿದ್ದರು. ಇತ್ತೀಚೆಗೆ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿತ್ತು. ಕೃಷಿ ಮೂಲದ ಮಂದಾರರು ಮೂಡುಬಿದಿರೆ ಸಮೀಪ ʻಮಂದಾರ ತೋಟದ ಮನೆʼ ಎಂಬ ಮಾದರೀ ಕೃಷಿಭೂಮಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.