ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆ

ದಕ್ಷಿಣ ಕನ್ನಡ:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆಯು ಕೆ.ಜೆ.ಯು. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ಸಭಾಭವನದಲ್ಲಿ  ಜರುಗಿತು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು  ಕೆ‌.ಜೆ.ಯು. ಘಟಕದ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಂದಿನ ಅವಧಿಗೆ  ನೂತನ ಜಿಲ್ಲಾ ಸಮಿತಿಯನ್ನು ನೇಮಕ ಮಾಡಲಾಯಿತು. ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಬಂಟ್ವಾಳ್, ಗೌರವ ಸಲಹೆಗಾರರಾಗಿ ರಿಚರ್ಡ್ ಲಸ್ರಾದೋ,  ನೂತನ ಅಧ್ಯಕ್ಷರಾಗಿ  ತಾರನಾಥ ಗಟ್ಟಿ ಕಾಪಿಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿಯಾಗಿ ಗಿರಿಧರ ಶೆಟ್ಟಿ , ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ವಿಟ್ಲ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಮಂದಾರ ರಾಜೇಶ್ ಭಟ್, ಲಕ್ಷ್ಮಣ ಕುಂದರ್, ಶರೀಫ್ ಜಟ್ಟಿಪಳ್ಳ, ಜ್ಯೋತಿ ಪ್ರಕಾಶ್ ಪುಣಚ ಆಯ್ಕೆಯಾದರು.

ಕಾರ್ಯದರ್ಶಿಗಳಾಗಿ ಶ್ರೀಮತಿ ವಾಯ್ಲೆಟ್ ಪಿರೇರಾ, ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಶ್ರೀಮತಿ ಹೇಮಾ ಜಯರಾಮ ರೈ, ಗಣೇಶ್ ಕುಕ್ಕುದಡಿ ಆಯ್ಕೆಯಾದರು. ಸದಸ್ಯತ್ವ ಅಭಿಯಾನದ ಸಂಚಾಲಕರಾಗಿ ಈಶ್ವರ ವಾರಣಾಶಿಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಈಶ್ವರ ವಾರಣಾಶಿ, ಗೋಪಾಲ ಅಂಚನ್, ಶಿವಪ್ರಸಾದ್ ಆಲೆಟ್ಟಿ, ರಾಮದಾಸ್ ವಿಟ್ಲ, ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶ್ರೀಧರ ಕಜೆಗದ್ದೆ, ರಮೇಶ್ ಪೆರ್ಲ,  ರಮೇಶ್ ನೀರಬಿದಿರೆ, ವಿನಯ್ ಜಾಲ್ಸೂರು, ಕೆ.ಟಿ. ಬಾಗೀಶ್ ಕೊಯಿಕುಳಿ, ವಿನಯ್ ಕಲ್ಮಡ್ಕ, ಕುಶಾಂತ್ ಕೊರತ್ಯಡ್ಕ, ಧನರಾಜ್, ಶ್ರೀಮತಿ ರಮ್ಯಾ ಸತೀಶ್ ಕಳಂಜ, ಶ್ರೀಮತಿ ರೇಖಾ ಸುಭಾಷ್, ಫ್ಲಾಯ್ಡ್ ಜೀವನ್ ಫರ್ನಾಂಡೀಸ್ ಆಯ್ಕೆಯಾದರು. ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿಯವರನ್ನು ಸದಸ್ಯತ್ವ ಅಭಿಯಾನದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಕೆಜೆಯು ಸದಸ್ಯತ್ವದ ಬಗ್ಗೆ ಚರ್ಚೆ ನಡೆಯಿತು.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ವೇದಿಕೆಯಲ್ಲಿ ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ವಿಟ್ಲ, ಜ್ಯೋತಿಪ್ರಕಾಶ್ ಪುಣಚ, ರಿಚರ್ಡ್ ಲಸ್ರಾದೋ, ತಾರನಾಥ ಗಟ್ಟಿ ಕಾಪಿಕಾಡು, ಕೆನ್ಯೂನ್ ಪಿಂಟೋ ಉಪಸ್ಥಿತರಿದ್ದರು.

ಕೆ.ಜೆ.ಯು. ದ.ಕ. ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share

Leave a Reply

Your email address will not be published. Required fields are marked *