ʻನೀವು ತರಕಾರಿ ಪ್ರಿಯರೇ… ಡೈಲೀ ಹಣ್ಣು ಸೇವಿಸ್ತಿರೋ…ಹಾಗಾದ್ರೆ ಈ ಸ್ಟೋರಿನ ಓದ್ಲೇ ಬೇಕು. ಇದು ಎದೆ ಝಲ್ ಎನ್ನಿಸುವ ಆಘಾತಕಾರಿ ಅಂಶವನ್ನು ನಿಮಗೆ ಕೊಡುತ್ತಿದೆ. ಗಡಿನಾಡ ಕಾಸರಗೋಡಿನವರ ಎದೆ ನಡುಗಿಸುವುದಂತೂ ಸತ್ಯ. ಹಾಗಾದ್ರೆ ಏನು ವಿಶೇಷ ಅಂತೀರಾ…ಒಮ್ಮೆ ಓದಿ ನೋಡಿʼ
ಕೇರಳಕ್ಕೆ ಆಗಮಿಸುತ್ತಿರುವ ಅಪಾರ ಪ್ರಮಾಣದ ತರಕಾರಿ ಹಾಗೂ ಹಣ್ಣುಗಳಲ್ಲಿ ಅಪಾಯಕಾರಿ ವಿಷ ಪದಾರ್ಥ ಪತ್ತೆಯಾಗಿವೆ. ಸೇಫ್ ಟು ಈಟ್ ಯೋಜನೆಯಡಿ ಕೃಷಿ ವಿಶ್ವವಿದ್ಯಾನಿಲಯವು ನಡೆಸುತ್ತಿರುವ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. ೩೫ಕ್ಕಿಂತ ಹೆಚ್ಚು ತರಕಾರಿಗಳು ವಿಷಕಾರಿ ಎಂಬ ಅಂಶ ಬಹಿರಂಗ ಗೊಂಡಿದೆ.
ಹಣ್ಣುಗಳು ಮತ್ತು ಮಸಾಲೆಗಳು ಸಹ ವಿಷಕಾರಿಯಾಗಿದ್ದು ಇದರಿಂದಾಗಿ ಅನಾಹುತ ಸಂಭವಿಸಬಹುದಾಗಿದೆ ಎಂದು ವರದಿ ಹೇಳಿದೆ. ಯೋಜನೆಯ ೫೭ನೇ ವರದಿಯ ಪ್ರಕಾರ, ಹಸಿರು ಪಾಲಕ್, ಬಾಜಿಮುಲಾಕ್, ಕ್ಯಾಪ್ಸಿಕಂ, ಕೋಸುಗಡ್ಡೆ, ಬಿಳಿಬದನೆ ಮತ್ತು ಸಾಂಬಾರ್ ಮೆಣಸಿನಕಾಯಿಯಂತಹ ತರಕಾರಿಗಳಲ್ಲಿ ಹೆಚ್ಚಿನ ವಿಷಕಾರೀ ಕೀಟನಾಶಕಗಳು ಪತ್ತೆಯಾಗಿವೆ.
ಸಾಮಾನ್ಯ ಮಾರುಕಟ್ಟೆಗೆ ಹೋಲಿಸಿದರೆ ರೈತರಿಂದ ನೇರವಾಗಿ ಸಂಗ್ರಹಿಸಿದ ತರಕಾರಿಗಳು ಕಡಿಮೆ ವಿಷ ಹೊಂದಿವೆ ಎಂದು ವರದಿ ಹೇಳಿದೆ. ರೈತರಿಂದ ನೇರವಾಗಿ ಪಡೆದ ತರಕಾರಿಯಲ್ಲಿ೨೭.೪೭ ರಷ್ಟು ವಿಷತ್ವ ಪತ್ತೆಯಾಗಿದೆ. ಸಾವಯವ ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಅಂಗಡಿಯ ತರಕಾರಿಗಳು ಈ ರೀತಿಯ ವಿಷಕಾರಿ ಅಂಶವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೊಂದಿದೆ ಎಂದು ಹೇಳಲಾಗಿದೆ. ವಾಣಿಜ್ಯ ಹಣ್ಣುಗಳಾದ ರೋಬಸ್ಟಾ, ಸಪೋಟಾ ಮತ್ತು ಒಣದ್ರಾಕ್ಷಿಗಳಲ್ಲಿ ಶೇ.೫೦ರಷ್ಟು ಕೀಟನಾಶಕಗಳಿವೆ. ಏಲಕ್ಕಿ, ಪುಡಿಮಾಡಿದ ಮೆಣಸು ಮತ್ತು ಕಾಶ್ಮೀರಿ ಮೆಣಸಿನಕಾಯಿಗಳಂತಹ ಮಸಾಲೆಗಳಲ್ಲೂ ವಿಷವಿದೆ. ಅಧ್ಯಯನಕ್ಕಾಗಿ ಒಟ್ಟು ೮೬೮ ಮಾದರಿಗಳನ್ನು ಪರೀಕ್ಷಿಸಲಾಗಿದೆ.