ಪೆರಿಂಜೆ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದ ವತಿಯಿಂದ ದ್ವಿತೀಯ ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕ ಹರೀಶ್ ಪೂಂಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೈವಸ್ಥಾನದ ಆನುವಂಶಿಕ ಮೊಕ್ತೇಸರ ಎ ಜೀವಂಧರ್ ಕುಮಾರ್ , ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಮಾರೂರು ಖಂಡಿಗದ ರಾಮದಾಸ ಆಸ್ರಣ್ಣ, ಉದ್ಯಮಿ ಭಾಸ್ಕರ ಪೈ, ಪ್ರಗತಿಪರ ಕೃಷಿಕ ಸೀತಾರಾಮ ರೈ, ಸುಲೋಚನಾ ಜೀವಂಧರ್ ಕುಮಾರ್, ವಿಶ್ವಾಸ್ ಜೈನ್, ವಿಕಾಸ್ ಜೈನ್ ಉಪಸ್ಥಿತರಿದ್ದರು.