MOODBIDRI : ಕಗ್ಗದ ಬೆಳಕಲ್ಲಿ ಸಾಕ್ಷಾತ್ಕಾರವಿದೆ : ಜಿ. ಎಸ್. ನಟೇಶ್

ಮೂಡಬಿದಿರೆ: ಡಿ.ವಿ.ಜಿಯವರ ಕಗ್ಗದಲ್ಲಿ ದೈವಸಾಕ್ಷಾತ್ಕಾರವಿದೆ. ಜೀವನಾನುಭವದ ಸತ್ವವಿದೆ. ಗೀತೆಯ ಬೆಳಕಿದೆ. ಅದರ ಸಾನಿಧ್ಯವಲಯಕ್ಕೆ ಸಿಕ್ಕಿಬಿದ್ದವುಗಳೆಲ್ಲ ಜ್ಯೋತರ‍್ಮಯವಾಗುತ್ತದೆ. ಕಗ್ಗದಾರ್ಶನಿಕದರ್ಶನ ಶಾಸ್ತ್ರವಾಗಿ ಮನುಕುಲ ಕಂಡ ಶ್ರೇಷ್ಠ ಪ್ರದೀಪ್ತಿ ಎಂದು ಖ್ಯಾತ ವಾಗ್ಮಿ ಜಿ. ಎಸ್ ನಟೇಶ್ ಹೇಳಿದರು.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ಅವರು ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ ‘ಕಗ್ಗದ ಬೆಳಕು’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಯು ಮನುಷ್ಯ ಹೃದಯಗಳನ್ನು ಮಾನವತಾದಾರದಿಂದ ಪೋಣಿಸುವ ಮಾನವತಾವಾದಿಯಾಗಲು ಮಂಕುತಿಮ್ಮನ ಕಗ್ಗ ಬೆಳಕಾಗಲಿಎಂದರು.

ಖ್ಯಾತ ವಾಗ್ಮಿ ಜಿ. ಎಸ್ ನಟೇಶ್

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜಜೈನ್, ಆಡಳಿತ ನಿರ್ದೇಶಕಡಾ| ಸಂಪತ್‌ಕುಮಾರ್, ಪ್ರಾಂಶುಪಾಲರಾದ ಪ್ರದೀಪ್‌ಕುಮರ್ ಶೆಟ್ಟಿ, ಪ್ರೌಢಶಾಲ ಮುಖ್ಯೋಪಾದ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿ  ಯಶಸ್ವಿನಿ ರಾಜೇಂದ್ರ ನಿರೂಪಿಸಿ ಡಾ| ವಾದಿರಾಜ್‌ ಕಲ್ಲೂರಾಯ ವಂದಿಸಿದರು.

Share

Leave a Reply

Your email address will not be published. Required fields are marked *