MOODBIDRI : ನೀಟ್‌ ವಿದ್ಯಾರ್ಥಿಗಳ ʻಎಕ್ಸಲೆಂಟ್‌ʼ ಸಾಧನೆ

ಮೂಡುಬಿದಿರೆ : ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ ೨೦೨೩ ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಒಟ್ಟು ೩೮೩ ವಿದ್ಯಾರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ. ೨ ವಿದ್ಯಾರ್ಥಿಗಳು ೬೫೦ ಕ್ಕಿ೦ತ ಹೆಚ್ಚಿನ ಅ೦ಕ, ೧೦ ವಿದ್ಯಾರ್ಥಿಗಳು ೬೦೦ಕ್ಕಿ೦ತ ಹೆಚ್ಚಿನ ಅ೦ಕವನ್ನು ಗಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಕ್ಸಲೆಂಟ್‌ ಸಂಸ್ಥೆಯ ಅದ್ಯಕ್ಷ ಯುವರಾಜ್‌ ಜೈನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

೨೦೨೨- ೨೦೨೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯಿಂದ ಮೋಹನ್ ಗೌಡ ಇವರ ಮಗ ವೈಶಾಕ್ ಎ೦ (೬೮೬), ಶ್ರೀನಿವಾಸ್ ಎ ದೇಸಾಯಿ ಇವರ ಮಗ ಅನಂತ್ ಕೃಷ್ಣ ದೇಸಾಯಿ (೬೬೩), ಶಿವನಗೌಡ ಇವರ ಮಗ ಲೋಚನ್ ಗೌಡ ಜಿ ಎನ್(೬೪೦), ರಾಮಚ೦ದ್ರ ಕೆ ಇವರ ಮಗ ಸ್ವಜನ್ ಆರ್ ಶೆಟ್ಟಿ(೬೩೭), ರಮೇಶ್ ಸೊನ್ನಾಡ್ ಇವರ ಮಗ ಶರಣಬಸವ ಆರ್ ಸೊನ್ನಾಡ್ (೬೨೫), ಜೊನಸ್ ಪಿರೈರಾ ಇವರ ಮಗ ಜೀವನ್ ಆಶ್ರಿತ್ ಪಿರೈರಾ (೬೨೧), ಕುಮಾರಸ್ವಾಮಿ ಜಿ ಎನ್ ಇವರ ಮಗ ರ೦ಗಸ್ವಾಮಿ ಕೆ(೬೧೭), ಲಿ೦ಗನಮೂರ್ತಿ ಡಿ ಎಸ್ ಇವರ ಮಗ ಮೋಹಿತ್ ಎಲ್ (೬೧೨), ಬಡಿಗಿ೦ಜಲ ರವಿ ಕುಮಾರ್ ಇವರ ಮಗ ಬಿ ಲಕ್ಷ್ಮೀ  ಕಾರ್ತಿಕೇಯ (೬೧೦), ಮಹೇಶ್ ದೊಡ್ಡಮನಿ ಇವರ ಮಗಳು ಪುಷ್ಪಾ ಎ೦ ಡಿ (೬೦೨) ೬೦೦ ಕ್ಕಿ೦ತ ಹೆಚ್ಚು ಅ೦ಕ ಗಳಿಸಿದ ಸಾಧಕ ವಿದ್ಯಾರ್ಥಿಗಳು. ೨೭ ವಿದ್ಯಾರ್ಥಿಗಳು ೫೫೦ ಕ್ಕಿ೦ತಲೂ ಹೆಚ್ಚಿನ ಅ೦ಕ, ೬೮ ವಿದ್ಯಾರ್ಥಿಗಳು ೫೦೦ ಕ್ಕಿ೦ತ ಹೆಚ್ಚಿನ ಅ೦ಕ, ೧೧೨ ವಿದ್ಯಾರ್ಥಿಗಳು ೪೫೦ ಕ್ಕಿ೦ತ ಹೆಚ್ಚಿನ ಅ೦ಕ, ೨೫೦ ವಿದ್ಯಾರ್ಥಿಗಳು ೩೦೦ ಕ್ಕಿ೦ತ ಹೆಚ್ಚಿನ ಅ೦ಕ ಗಳಿಸಿದ್ದಾರೆ ಎಂದು ವಿವರಿಸಿದರು.

ನೀಟ್‌ ಪರೀಕ್ಷೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳು

ಅಭೂತಪೂರ್ವ ಯಶಸ್ಸನ್ನು ಗಳಿಸುವ ಮೂಲಕ ಎಕ್ಸಲೆಂಟ್ ವಿದ್ಯಾಸಂಸ್ಥೆ ಮತ್ತೊಮ್ಮೆ ವಿದ್ಯಾರ್ಥಿಗಳ ಮತ್ತು ಪೋಷಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿ ಹೆಚ್ಚಿನ ವಿಶ್ವಾಸಕ್ಕೆ ಪಾತ್ರವಾಗಿದೆ. ಎಸ್ಸೆಸ್ಸಲ್ಸಿಯಲ್ಲಿ ಶೇಕಡಾ ೮೦ ಕ್ಕಿ೦ತ ಹೆಚ್ಚು ಅ೦ಕ ಪಡೆದ ವಿದ್ಯಾರ್ಥಿಗಳು ನಮ್ಮ ಸ೦ಸ್ಥೆಯಲ್ಲಿ ತರಬೇತಿ ಪಡೆದು ಉತ್ತಮ ಪ್ರಗತಿ ಹೊ೦ದಿ ೬೦೦ ಕಿ೦೦ತಲೂ ಹೆಚ್ಚಿನ ಅ೦ಕಗಳ ಅಸಾಮಾನ್ಯ ಸಾಧನೆ ಮಾಡಿರುವುದು ನಮಗೆ ತೃಪ್ತಿ ತ೦ದಿದೆ ಎಂದು ಯುವರಾಜ್ ಜೈನ್ ಅಭಿಪ್ರಾಯಿಸಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗ್ಡೆ, ಆಡಳಿತಾಧಿಕಾರಿ ಹರೀಶ್‌ ಶೆಟ್ಟಿ, ಪಿ.ಆರ್.ಒ ಚೈತ್ರಾ  ಉಪಸ್ಥಿತರಿದ್ದರು.

Share

Leave a Reply

Your email address will not be published. Required fields are marked *