ಮೂಡುಬಿದಿರೆ: ಪರಮಪೂಜ್ಯ ಗಣಿನಿ ಅಯಿ೯ಕಾ ವಿಶಿಷ್ಟ್ ಮತಿ ಮಾತಾಜಿ ಅವರ ಸಂಘದ ಇತರ ಮೂವರು ಸಾದ್ವಿಜೀ ಕಾರ್ಕಳ ಕ್ಷೇತ್ರದಿಂದ ಬೆಳುವಾಯಿ ಅಲಂಗಾರು ಮೂಲಕ ಶನಿವಾರ ಜೈನಕಾಶಿ ಮೂಡುಬಿದಿರೆ ಗೆ ಪುರ ಪ್ರವೇಶ ಮಾಡಿ ಬಸದಿ ದರ್ಶನ ಮಾಡಿದರು. ಎಲ್ಲರೂ ಶ್ರದ್ದಾ ಭಕ್ತಿಯಿಂದ ಜೈನ ಪೇಟೆ,ಬಡಗು ಬಸದಿ ಬಳಿಯಿಂದ ಪೂರ್ಣ ಕುಂಭ ಸ್ವಾಗತ ಮಾಡಿ ಕ್ಷೇತ್ರಕ್ಕೆ ಬರ ಮಾಡಿ ಕೊಂಡರು. ಬೆಳಿಗ್ಗೆ 18ಬಸದಿ ದರ್ಶನ ವನ್ನು ಬರಿ ಗಾಲಿನ ಪಾದಯಾತ್ರೆಯಲ್ಲಿ ದರ್ಶನ ಮಾಡಿದರು. ಆಹಾರ ಚರ್ಯೆ ನೆರವೇರಿತು ಮಧ್ಯಾಹ್ನ ಶ್ರೀ ಮಠ ದಲ್ಲಿ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸಿದ್ದಾoಥ ದರ್ಶನ ಮಾಡಿಸಿದರು.

ಮಾತಾಜಿ ಸಂಘ ಕ್ಷೇತ್ರ ದಲ್ಲಿರುವ 108ದಿವ್ಯ ಸಾಗರ ಮುನಿ ರಾಜರ ದರ್ಶನ ಮಾಡಿದರು ಬಳಿಕ ಶ್ರೀ ಮಠ ದಿಂದ ಸರ್ವ ಸಾದ್ವಿ ಯರಿಗೆ ಗುರುವಂದನೆ ಸಲ್ಲಿಸಲಾಯಿತು. ಮೂಡುಬಿದಿರೆಯಿಂದ ಹೊಸಂಗಡಿ,ವೇಣೂರು ಕಡೆ ವಿಹಾರ ಮಾಡಿದರು.
ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಮಹಿಳಾ ಸಂಘ ದ ಸುಧಾ ಪಾರ್ಶ್ವ ನಾಥ್, ಶ್ವೇತಾ ಜೈನ್, ವೀಣಾ, ಮಂಜುಳಾ, ಸನತ್ ಕುಮಾರ್, ಸೂರಜ್, ಮಿತ್ರ ಸೇನ್, ಕೃಷ್ಣ ರಾಜ್ ಹೆಗ್ಡೆ ಅನಂತ್ ಕುಮಾರ್ ಸಂಜಯಂತ ಕುಮಾರ್ ಶೆಟ್ಟಿ ಮೊದಲಾದವರಿದ್ದರು.