MOODBIDRI :ದೇವರು ಮೆಚ್ಚುವ ಕಾರ್ಯ ಮಾಡಿದ ಪಾಲಿಟೆಕ್ನಿಕ್

ಎಸ್ ಎನ್ ಎಂ ಪಾಲಿಟೆಕ್ನಿಕ್ ನ ಎನ್ ಎಸ್ ಎಸ್ ಘಟಕದಿಂದ ಮೂರು‌ ಸೂರುಗಳಿಗೆ ಟಾರ್ಪಲ್ ಹೊದಿಕೆ

ಮೂಡುಬಿದಿರೆ: ಎಸ್ಎನ್ ಎಂ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿನ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ 3 ಅಸಹಾಯಕ ಕುಟುಂಬಗಳ ಮನೆಗಳಿಗೆ ಟಾರ್ಪಲ್ ಹೊದಿಸುವ ಮೂಲಕ ಶ್ಲಾಘನೀಯ ಸೇವಾ ಕಾರ್ಯವನ್ನು ಶುಕ್ರವಾರ ಕೈಗೊಂಡರು.‌

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆ ಗ್ರಾಮದಲ್ಲಿ ತೀರ ಬಡತನದಲ್ಲಿರುವ ಕುಲ್ಲಂಗಲ್ಲು ವೀರಪ್ಪ ಮೂಲ್ಯರ ಮನೆ, ಕುಂಗೂರು ಗ್ರಾಮದ ಚಾವಡಿ ಮನೆ ರಸ್ತೆಯ ಸಂಜೀವ ಹಾಗೂ ವಾಸು ಇವರುಗಳ ಮನೆ ತೀರಾ ಅವ್ಯವಸ್ಥೆಯಿಂದ ಕೂಡಿದ್ದು ಮಳೆ ಬಂದಾಗ ಸೋರಿ ಮನೆಯಲ್ಲಿ ಜನರು ಕುಳಿತುಕೊಳ್ಳಲು ಅಸಾಧ್ಯವಾಗಿತ್ತು. ಇಂತಹ ಅಸಹಾಯಕ ಕುಟುಂಬಗಳ ಪರಿಸ್ಥಿತಿಯನ್ನು ಕಂಡ ಎಸ್ ಎನ್ ಎಂ ಪಾಲಿಟೆಕ್ನಿಕ್ ನ ಎನ್‌ಎಸ್ ಎಸ್ ಘಟಕವು ಇಲ್ಲಿ ತಮ್ಮ ಸೇವಾ ಕಾರ್ಯವನ್ನು ಕೈಗಿತ್ತಿಕೊಂಡು ಮೂರು ಮನೆಗಳ ಕುಟುಂಬಗಳಿಗೆ ನೆಮ್ಮದಿಯಿಂದ ಮಳೆಗಾಲವನ್ನು ಕಳೆಯುವ ಅವಕಾಶವನ್ನು ಮಾಡಿಕೊಟ್ಟಿತ್ತು.

ಮನೆಗಳ ಮಾಡಿಗೆ ಟಾರ್ಪಲ್ ಹೊದೆಸಿ, ಮನೆಯ ಸುತ್ತಮುತ್ತಲಿನ ಆವರಣ ಸ್ವಚ್ಛತೆ, ಸಣ್ಣ ಪುಟ್ಟ ವಿದ್ಯುತ್ ಉಪಕರಣದ ದುರಸ್ತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಜೆ. ಜೆ. ಪಿಂಟೋ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಹಾಗೂ ಗೋಪಾಲಕೃಷ್ಣ ಇವರ ಮಾರ್ಗದರ್ಶನದಲ್ಲಿ , ವಿದ್ಯಾರ್ಥಿ ನಾಯಕರಾದ ಪ್ರಖ್ಯಾತ್ , ರಾಯನ್, ರಿತೇಶ್, ಪ್ರೀತಿ, ಧನುಶ್ರೀ ನೇತೃತ್ವದಲ್ಲಿ ಸುಮಾರು 15 ಎನ್ ಎಸ್ ಎಸ್ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ , ಸದಸ್ಯರಾದ ಸುಮಾ ಭಟ್ ಸೇವಾ ಕಾರ್ಯದ ಸಂದರ್ಭದಲ್ಲಿ ಭೇಟಿ ನೀಡಿದರು.

ವಿದ್ಯಾರ್ಥಿಗಳಿಗೆ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಇವರು ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದರು.

Share

Leave a Reply

Your email address will not be published. Required fields are marked *