ಮೂಡುಬಿದಿರೆ: ಎಕ್ಸಲೆಂಟ್ ಎನ್ನುವುದು ಜೀವನ ಮೌಲ್ಯಗಳನ್ನು ಕಲಿಸುವ ಜಾಗ ಇಲ್ಲಿ ಕಲಿಕೆಗೆ ಶಿಸ್ತು ಮುಖ್ಯ ಆ ಶಿಸ್ತು ಬದುಕನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಯಾವತ್ತೂ ನಿಲ್ಲಬಾರದು ನಿರಂತರ ಪ್ರಯತ್ನದಿಂದ ಬದುಕಲ್ಲಿ ಬದಲಾವಣೆ ಸಾಧ್ಯ ಇದಕ್ಕಾಗಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಪೋಷಕ-ಶಿಕ್ಷಕರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಪುಷ್ಪರಾಜ್ ಮಾತನಾಡಿ, ಮಕ್ಕಳ ಸಾಧನೆಯನ್ನು ಸಾಕ್ಷಾತ್ಕರಿಸುವುದು ಹೆತ್ತವರ ಕರ್ತವ್ಯ. ಜೀವನದಲ್ಲಿ ಗೆಲುವನ್ನು ಸಾಧಿಸಲು ಮಕ್ಕಳಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಬೇಕು ಜೊತೆಗೆ ನಿರಂತರವಾಗಿ ಮಕ್ಕಳ ಪ್ರಗತಿಗೆ ಹೆತ್ತವರು ಪ್ರೇರಣೆಯನ್ನು ನೀಡಬೇಕು ಭವಿಷ್ಯದ ಕನಸ್ಸನ್ನು ಕಾಣವಂತೆ ಮಾರ್ಗದರ್ಶನ ನೀಡಬೇಕು ಎಂದರು.

ಸAಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಪೋಷಕರ ಪ್ರೀತಿ ಅಭಿಮಾನದಿಂದ ನಮ್ಮ ವಿದ್ಯಾ ಸಂಸ್ಥೆ ಬೆಳೆಯುತ್ತಿದೆ. ಮಕ್ಕಳ ಶಿಕ್ಷಣದ ಪ್ರಗತಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ.ಪೋಷಕರ ನಡುವಿನ ಅನ್ನೋನ್ಯತೆ ಮಕ್ಕಳ ಕಲಿಕಾ ಪ್ರಗತಿಗೆ ಸಹಕಾರಿಯಾಗುತ್ತದೆ.ನಿಮ್ಮ ಮಕ್ಕಳ ಜವಾಬ್ದಾರಿ ನಮ್ಮದು ಎಂದರು.
ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಸ್ವಾಗತಿಸಿ, ಸಾಧಕ ವಿದ್ಯಾರ್ಥಿಗಳ ಮಾಹಿತಿ ನೀಡಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಸಹ ಮುಖ್ಯ ಶಿಕ್ಷಕ ಜಯಶೀಲ ವಂದಿಸಿದರು.