ಅಬುದಾಬಿ: ಬೃಹತ್ ಹಿಂದೂ ದೇವಾಲಯಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

ಇದೇ ಬರುವ ಫೆಬ್ರವರಿ 2024 ರಂದು ಅಬುದಾಬಿಯಲ್ಲಿ ಸಮರ್ಪಣೆಯಾಗಲಿರುವ ಅರಬ್ ರಾಷ್ಟ್ರದ ಪ್ರಥಮ ಬೃಹತ್ ಹಿಂದೂ ದೇವಸ್ಥಾನಕ್ಕೆ ಯೂಥ್ ಆಫ್ ಜಿ ಎಸ್ ಬಿ ತಂಡ ಹಾಗೂ ತನ್ನೊಂದಿಗೆ ಆಗಮಿಸಿದ ಸುಮಾರು 130 ಜಿ ಎಸ್ ಬಿ ಸಮುಯದಾಯದ ಮಂದಿ ಭೇಟಿ ನೀಡಿ ಮಂದಿರ ನಿರ್ಮಾಣಕ್ಕೆ ಉಪಯೋಗವಾಗುವ ಇಟ್ಟಿಗೆಗೆ ಪೂಜೆ ಸಲ್ಲಿಸಿ ದೇಣಿಗೆ ಸಮರ್ಪಿಸಿದರು.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

2018 ರಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರಕಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರೊಜೆಕ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು. ಸುಮಾರು 55 ಸಾವಿರ ಚದರ ಕಿ ಮೀ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಹಿಂದೂ ಮಂದಿರದಲ್ಲಿ ಸ್ವಾಮಿ ನಾರಾಯಣ, ವೆಂಕಟರಮಣ, ರಾಮ,ಕೃಷ್ಣ, ಶಿವ , ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ. ಬ್ಯಾಪ್ಸ್ ಸಂಸ್ಥೆ ಮಂದಿರ ನಿರ್ಮಾಣದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು ಮಂದಿರದ ಆವರಣದಲ್ಲಿ ಧಾರ್ಮಿಕ ಪ್ರವಚನದ ಸಭಾಂಗಣ, ಕ್ರೀಡಾಂಗಣ, ಪವಿತ್ರ ನದಿಗಳ ತೀರ್ಥ ಒಳಗೊಂಡ ಕೆರೆ, ಯೋಗ ಮಂಟಪ, ಕಲಾ ಮಂಟಪ ಕೂಡ ನಿರ್ಮಾಣಗೊಳ್ಳಲಾಗಿದೆ ಎಂದು ತಿಳಿಸಲಾಯಿತು.

ದೂರದ ಭಾರತದಿಂದ ಭಕ್ತಾದಿಗಳಾಗಿ ಭಾಗವಹಿಸಿದ ಯೂಥ್ ಆಫ್ ಜಿ ಎಸ್ ಬಿ ತಂಡಕ್ಕೆ ಬ್ಯಾಪ್ಸ್ ಸಂಸ್ಥೆ ಮಂದಿರದ ಸಂಪೂರ್ಣ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಇಟ್ಟಿಗೆಗೆ ಪೂಜೆಯನ್ನೂ ನೆರವೇರಿಸಲಾಯಿತು.

ಜೀವಮಾನದ ಅವಿಸ್ಮರಣೀಯ ಘಟನೆಗಳಲ್ಲಿ ಇದು ಒಂದಾಗಿದ್ದು ವಿದೇಶದಲ್ಲಿ ಅದು ಕೂಡ ಇಸ್ಲಾಂ ರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಏಕೈಕ ಬೃಹತ್ ಹಿಂದೂ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ನಮಗೆ ದೊರೆತ ದೊಡ್ಡ ಭಾಗ್ಯ ಎಂದು ಸಮುದಾಯದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಸಂತೋಷ್ ಭಂಡಾರಿ, ಗೋಪಾಲಕೃಷ್ಣ ಭಟ್, ಸುಜಿತ್ ಬಾಳಿಗಾ ಹಾಗೂ ಇತರರು ಉಪಸ್ಥಿತರಿದ್ದರು.
ಮೊದಲ ಅಂತರರಾಷ್ಟ್ರೀಯ ಜಿ ಎಸ್ ಬಿ ಸಮ್ಮೇಳನದ ಅಂಗವಾಗಿ ದುಬೈ ಗೆ ಜಿ ಎಸ್ ಬಿ ಸಮುದಾಯ ಪ್ರವಾಸ ಕೈಗೊಂಡಿದ್ದು ಈ ನಡುವೆ ಮಂದಿರಕ್ಕೆ ಭೇಟಿ ನೀಡಲಾಗಿತ್ತು.

Share

Leave a Reply

Your email address will not be published. Required fields are marked *