ಮೂಡುಬಿದಿರೆ: ಮಾರೂರು ಹೊಸಂಗಡಿ ಬಸದಿಯಲ್ಲಿ ರವಿವಾರ ವಾರ್ಷಿಕೋತ್ಸವ ನಿಮಿತ್ತ ವಿಮಾನ ಶುದ್ದಿ , ಭಗವಾನ್ 1008 ಶ್ರೀ ಶ್ರೀ ಶ್ರೀ ಪಾರ್ಶ್ವ ನಾಥ ಸ್ವಾಮಿ ಅಭಿಷೇಕ, ಶ್ರುತ ಗಣಧರ ಪೂಜೆ , ಪದ್ಮಾವತಿ ಯಕ್ಷಿಯರ ಷೋಡಶ ಉಪಚಾರ ಪೂಜೆ , ಬ್ರಹ್ಮ ದೇವರ ಪೂಜೆ , ಕ್ಷೇತ್ರ ಪಾಲ ಆರಾಧನೆ
ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ಜರಗಿತು.

ವಿಮಾನ ಶುದ್ದಿ , ಸಮ್ಯಕ್ ರತ್ನತ್ರಯ ಪಾಲಿಸಿದವರಿಗೆ ಮೋಕ್ಷದತ್ತ ಮಾರ್ಗದರ್ಶನ ಸಿಗುವುದು.
ಉತ್ತಮ ಗುಣದಿಂದ ಧರ್ಮ ದ ಸಂಪತ್ತು ಪ್ರಾಪ್ತಿ, ನಿಜವಾದ ಆನಂದ ಜೀವನ ದಲ್ಲಿ ಸಿಗಲು ಸಾಧ್ಯ ಎಂದು ಭಟ್ಟಾರಕ ಸ್ವಾಮೀಜಿ ಆಶೀರ್ವಚನವಿತ್ತರು.
ಅರುಣ ಇಂದ್ರ, ಹಾಗೂ ನಾಗರಾಜ್ ಇಂದ್ರ ಅವರು ಭಟ್ಟಾರಕ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಿದರು.
ಕೃಷ್ಣರಾಜ ಹೆಗ್ಡೆ,ಸುಕುಮಾರ್ ವಿದ್ಯಾನಂದ, ಪ್ರದೀಪ್ ಚಂದ್ರ ಜೈನ್, ಅಕ್ಷಯ್ ಕುಮಾರ್ ಮೊದಲಾದ ವರು ಉಪಸ್ಥಿತರಿದ್ದರು.