ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಈಗನ ಮಳೆಯು ಮುಂಗಾರು ರೀತಿಯಲ್ಲಿದ್ದರೂ ತಾಪಮಾನ ಏರಿಕೆಯಿಂದ ಸಿಡಿಲು ಹಾಗೂ ಗಾಳಿಯ ಸಹಿತ ಮಳೆಯ ನಿರೀಕ್ಷೆ ಇದೆ.
ಕೊಡಗು, ಸೋಮವಾರಪೇಟೆ, ಸಕಲೇಶಪುರ, ಮೂಡಿಗೆರೆ, ಶಿೃಂಗೇರಿ, ಕೊಪ್ಪ, ಕುದುರೆಮುಖ, ಆಗುಂಬೆ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೆ, ಹಾಸನ, ಉಳಿದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ, ಬೆಂಗಳೂರು, ತುಮಕೂರು, ಚಾಮರಾಜನಗರದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಪಾವಗಡ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಗಾಳಿಯು ಪ್ರಮುಖ ಪಾತ್ರ ವಹಿಸಲಿದೆ. ಗಾಳಿಯ ಬಗ್ಗೆ ಎಚ್ಚರವಿರಲಿ
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಸಂಜೆ ಅಲ್ಲಲ್ಲಿ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.ಉಷ್ಣಾಂಶ ಏರಿಕೆಯಿಂದಾಗಿ ರಾಜ್ಯದ ಒಂದೆರಡು ಕಡೆ ಅನಿರೀಕ್ಷಿತ ಗಾಳಿಯ ಸಹಿತ ಮಳೆಯ ಸಾಧ್ಯತೆಯೂ ಇದೆ.
ಮುಂಗಾರು ಸ್ಥಿತಿ : ಈಗಿನ ಮುನ್ಸೂಚನೆಯಂತೆ ಮುಂಗಾರು ಜೂನ್ 6 ಅಥವಾ 7ರಂದು ಕೇರಳ ಕರಾವಳಿ ಪ್ರವೇಶಿಸುವ ಲಕ್ಷಣಗಳಿವೆ. ಆರಂಭಕ ಮುಂಗಾರು ದುರ್ಬಲವಾಗಿರುವ ದುರ್ಬಲವಾಗಿರಲಿದೆ.