ಕಿನ್ನಿಗೋಳಿ: ಜನಪರ ಯೋಜನೆಗಳ ಮೂಲಕ ಜನತೆಯನ್ನು ತಲುಪುತ್ತಿರುವ ಆಮ್ ಆದ್ಮಿ ಪಕ್ಷ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿ ಪೇಟೆ, ಕಿನ್ನಿಗೋಳಿ ಸಂತೆ , ಮೂರುಕಾವೇರಿ ಭಾಗಗಳಲ್ಲಿ ಪಾದಯಾತ್ರೆಯ ಮೂಲಕ ಪ್ರಚಾರ ನಡೆಸಿತು.ಅಭ್ಯರ್ಥಿ ವಿಜಯನಾಥ ವಿಠ್ಠಲ ಶೆಟ್ಟಿ , ಕ್ಷೇತ್ರಾಧ್ಯಕ್ಷ ಸದಾಶಿವ ರಾವ್, ಪ್ರಮುಖರಾದ ಸಮದ್ ಕಿನ್ನಿಗೋಳಿ, ಥೋಮಸ್ ನಿಡ್ಡೋಡಿ, ಪ್ರಶಾಂತ್ ಹೆಬ್ಬಾರ್ ನೇತೃತ್ವ ವಹಿಸಿದ್ದರು.

ದೆಹಲಿ ಮಾದರಿಯ ಆಡಳಿತವನ್ನು ನಾವು ಇಲ್ಲಿ ಕೊಡುತ್ತೇವೆ. ಭ್ರಷ್ಟಾಚಾರ ನಿಲ್ಲಿಸಿ ಸಂಪನ್ಮೂಲ ಕ್ರೋಢೀಕರಿಸಿ, ಜನತೆಗೆ ಅತ್ಯವಶ್ಯಕವಾಗಿರುವ ವಿದ್ಯುತ್, ಆರೋಗ್ಯ, ಶಿಕ್ಷಣ,ನೀರಿನ ವ್ಯವಸ್ಥೆಯನ್ನು ಉಚಿತವಾಗಿ ನೀಡಲು ಆಮ್ ಆದ್ಮಿ ಬದ್ಧವಾಗಿದೆ ಎಂದು ಕ್ಷೇತ್ರಾಧ್ಯಕ್ಷ ಸದಾಶಿವ ರಾವ್ ಹೇಳಿದರು. ಮಹಿಳೆಯರಿಗೆ ಸರಕಾರೀ ಬಸ್ಸಿನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದರು. ಬೆಂಬಲಿಗರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
