ಮೂಡುಬಿದಿರೆ: ಅಸ್ಸಾಂ ರಾಜ್ಯದಲ್ಲಿ ಮಾದರಿ ಆಡಳಿತವನ್ನು ನೀಡಿ ದುಷ್ಟರಿಗೆ ಸಿಂಹಸ್ವಪ್ನವಾಗಿ ಕಾಡಿ ದೇಶಾದ್ಯಂತ ಹಿಂದೂ ಫಯರ್ ಬ್ರಾಂಡ್ ಎಂದು ಖ್ಯಾತರಾಗಿರುವ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳಾದ ಹಿಮಾಂತ ಬಿಸ್ವಾ ಶರ್ಮಾ ಮೇ.೭ರಂದು ಮೂಡುಬಿದಿರೆ ಕ್ಷೇತ್ರವ್ಯಾಪ್ತಿಯ ಶಿರ್ತಾಡಿಗೆ ಆಗಮಿಸುತ್ತಿದ್ದಾರೆ.

ಶಿರ್ತಾಡಿ ಜಂಕ್ಷನ್ ನಲ್ಲಿ ನಡೆಯುವ ಸಮಾವೇಶವನ್ನುದ್ದೇಶಿಸಿ ಬಿಸ್ವಾ ಶರ್ಮ ಮಾತನಾಡುವರು. ಜಿಲ್ಲೆ,ರಾಜ್ಯದ ಪ್ರಮುಖ ನಾಯಕರು, ಮುಖಂಡರು , ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.