ಮೂಡುಬಿದಿರೆ: ಜೆಇಇ ಮೈನ್ಸ್ನಲ್ಲಿ ಆಳ್ವಾಸ್ ಪಿಯು ಕಾಲೇಜು ಈ ಬಾರಿಯೂ ಅತ್ಯುತ್ತಮ ಸಾಧನೆ ಮಾಡಿದ್ದು, ೨೨ ಮಂದಿ ವಿದ್ಯಾರ್ಥಿಗಳು ೯೯ ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ೩೩೪ ಮಂದಿ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆಯನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭೌತಶಾಸ್ತçದಲ್ಲಿ ೧೧, ರಸಾಯನಶಾಸ್ತçದಲ್ಲಿ ೧೦ ಹಾಗೂ ಗಣಿತದಲ್ಲಿ ಒರ್ವ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ. ಮೂರು ವಿಷಯಗಳಲ್ಲಿ ೯೯ ಪರ್ಸಂಟೈಲ್‌ಗಿಂತ ಅಧಿಕ ಇಬ್ಬರು ವಿದ್ಯಾರ್ಥಿಗಳು, ೯೮ ಪರ್ಸಂಟೈಲ್‌ಗಿಂತ ಅಧಿಕ ೧೦ ವಿದ್ಯಾರ್ಥಿಗಳು, ೯೫ ಪರ್ಸಂಟೈಲ್‌ಗಿಂತ ಅಧಿಕ ೪೫ ವಿದ್ಯಾರ್ಥಿಗಳು ಹಾಗೂ ೯೦ ಪರ್ಸಂಟೈಲ್‌ಗಿಂತ ಅಧಿಕ ೧೬೯ ವಿದ್ಯಾರ್ಥಿಗಳು ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳು: ಶರತ್ ಸಂಗಮೇಶ್ ಬಿರಾದಾರ್(೯೯.೩೪೫೨ ಪರ್ಸಂಟೈಲ್), ಪ್ರದ್ಯುಮ್ನ ಭಟ್ ( ೯೯.೦೭೧೩), ಸಂಭವ್ ಪವಾರ್( ೯೮.೮೭೪೮), ವಿಶ್ವದೀಪ್ ಕೆ.ವಿ(೯೮.೭೮೭೫), ಅದಿತಿ(೯೮.೭೮೫೦), ಯಶಸ್ ಎನ್.ವಿ(೯೮.೬೦೭೫), ಕಿಶೋರ್ ಆರ್.(೯೮.೫೩೫೩), ಮುಕುಂದ್ ಅಶೋಕ್(೯೮.೪೨೨೭), ಸಮನ್ಯು ( ೯೮.೩೫೩೪), ವಿನಯ್ ಎಚ್.ಆರ್(೯೮.೩೨೦೪) ಪಡೆದಿದ್ದಾರೆ.
ಸ್ಪೂರ್ತಿ ಕೊಟಗಿ(೧೯೫ ರ‍್ಯಾಂಕ್), ನಂದಿನಿ(೨೭ರ‍್ಯಾಂಕ್) ಹಾಗೂ ಭಗವತ್‌ರಾಯ್ ಎಚ್.ಕಟ್ಲೂರು(೭೯೯ ರ‍್ಯಾಂಕ್) ಕ್ಯಾಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಸದಾಕತ್ ಉಪಸ್ಥಿತರಿದ್ದರು.