ಖ್ಯಾತ ಜ್ಯೋತಿಷಿ ಅಭಿಮತ
ಮೂಡುಬಿದಿರೆ: ವಿಧಾನ ಸಭಾ ಚುನಾವಣೆಗೆ ಬೆರಳೆಣಿಕೆಯ ದಿನ ಉಳಿದಿದೆ. ಮೇ.೧೦ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆದು ಮೇ.೧೩ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯ ಪೂರ್ವದಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿದ್ದು, ಜನಾಭಿಪ್ರಾಯ ಕ್ರೋಢೀಕರಿಸಿದೆ. ಯಾವೊಂದು ಪಕ್ಷವೂ ಬಹುಮತ ಪಡೆಯುವುದಿಲ್ಲ; ಬದಲಾಗಿ ಸಮ್ಮಿಶ್ರ ಸರಕಾರಕ್ಕೆ ಆದ್ಯತೆ ಹೆಚ್ಚಿರುವುದಾಗಿ ಸಮೀಕ್ಷೆಗಳು ಹೇಳಿವೆ.

ಜ್ಯೋತಿಷ್ಯವೇ ಬೇರೆ: ಭಾರತ ಸನಾತನ ಸಂಸ್ಕೃತಿ, ಸಂಸ್ಕಾರಗಳುಳ್ಳ ದೇಶ. ಇಲ್ಲಿ, ಜ್ಯೋತಿಷ್ಯ, ವೇದ ಶಾಸ್ತ್ರಗಳಿಗೆ ತನ್ನದೇ ಆದಂತಹ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿಯೇ ಪ್ರತಿಯೊಂದು ನಡೆಯುತ್ತಿದೆ ಎಂಬುದು ಗಮನಾರ್ಹ. ಈ ಬಾರಿಯ ಚುನಾವಣೆಯ ಫಲಿತಾಂಶ ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಗಮನಿಸಿದರೆ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆಯನ್ನೇರಲಿದೆಯಂತೆ. ಖ್ಯಾತ ಜ್ಯೋತಿಷಿ ಈ ಭವಿಷ್ಯ ತಿಳಿಸಿದ್ದಾರೆ. . ೧೨೮ ಸೀಟುಗಳೊಂದಿಗೆ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವುದು ಖಚಿತ ಎಂದ ಅವರು ರಾಷ್ಟ್ರೀಯಪಕ್ಷ ಕಾಂಗ್ರೆಸ್ ೬೫ ಸೀಟು, ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ೧೮, ಹಾಗು ಉಳಿದಂತೆ ಇತರೆ ಪಕ್ಷದವರು ಜಯಗಳಿಸುತ್ತಾರೆ ಎಂದಿದ್ದಾರೆ. ಈ ಹಿಂದೆ ದಕ್ಷಿಣ ಕನ್ನಡದಲ್ಲಿ ೭ ಸೀಟು ಬಿಜೆಪಿಗಿದ್ದು, ಈ ಬಾರಿ ೫ ಸೀಟುಗಳು ಖಚಿತ ಎಂದಿದ್ದಾರೆ. ಪುತ್ತೂರಿನಲ್ಲಿ ಪುತ್ತಿಲ ಜಯಭೇರಿ ಭಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಯುವ ಸಿ.ಎಂ: ಭಾರತೀಯ ಜನತಾ ಪಕ್ಷದಲ್ಲಿ ಓರ್ವ ಸಮರ್ಥ ಯುವ ನಾಯಕತ್ವದ ವ್ಯಕ್ತಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಯೇರಲಿದ್ದಾರೆ ಎಂದಿದ್ದಾರೆ. ಯಾವ ಕಾರಣಕ್ಕೂ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ರಚನೆಯಾಗುವುದಿಲ್ಲ ಎಂದು ಹೇಳಿದ್ದಾರೆ.