ನವದೆಹಲಿ: ಎರಡು ದಿನಗಳಿಂದ ಕೇದಾರನಾಥದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಮೇ.3ರಂದು ಯಾತ್ರೆ ನಿಲ್ಲಿಸಲಾಗಿದೆ. ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತೀವ್ರ ಹಿಮಪಾತದಿಂದಾಗಿ ಚಳಿ ಹೆಚ್ಚಾಗಿದೆ. ಯಾತ್ರೆಗೆ ತೆರಳುವವರಿಗೆ ತೀವ್ರ ಅಡ್ಡಿಯಾಗುತ್ತಿದೆ. ನೀವಿದ್ದಲ್ಲಿಯೇ ಸುರಕ್ಷಿತವಾಗಿ ಉಳಿದುಕೊಳ್ಳಿ ಎಂಬ ಸಂದೇಶ ರವಾನೆಯಾಗಿದೆ. ಕೇದಾರನಾಥ ಯಾತ್ರಿಕರ ನೋಂದಣಿಯನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

