MOODUBIDIRI:ಗೆಲುವು ನಮ್ಮದೇ -ಕೋಟ್ಯಾನ್‌ ವಿಶ್ವಾಸ

ಮೂಡುಬಿದಿರೆ: ಬಿಜೆಪಿ ಮಹಾ ಅಭಿಯಾನದ ಅಂಗವಾಗಿ ಪುರಸಭಾ ವ್ಯಾಪ್ತಿಯ ಗಾಂಧಿನಗರದ ಕಡ್ದಬೆಟ್ಟು ವಾಡ್೯ನಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಮತಯಾಚನೆ ಮಾಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೋಟ್ಯಾನ್ ಅವರು ಕಾರ್ಯಕರ್ತರು ಕ್ಷೇತ್ರದ 221 ಬೂತ್ ಗಳಲ್ಲಿ ದೊಡ್ಡದಾದ ಅಭಿಯಾನವನ್ನು ಕೈಗೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿಕೇಂದ್ರಗಳು ಉತ್ತಮ ಕೆಲಸಕಾರ್ಯಗಳನ್ನು ಮಾಡುತ್ತಿವೆ. ಇದು ಕಡ್ದಬೆಟ್ಟುವಿನ 64ನೇ ಬೂತ್ ನನ್ನದಾಗಿದೆ ಆದ್ದರಿಂದ ಇಲ್ಲಿ ಮನೆ ಮನೆಗೆ ತೆರಳಿ ಮತವನ್ನು ಯಾಚಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯಾಗಿದೆ. ಅಭಿವೃದ್ಧಿಯ ಮೂಲಕ ಜನರಲ್ಲಿ ಬಳಿಗೆ ತೆರಳುತ್ತಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.

ಕಾರ್ಯಕರ್ತರು ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಮತಯಾಚಿಸಿದರು.
ವಾಡ್ ೯ ಸದಸ್ಯೆ ದಿವ್ಯಾ ಜಗದೀಶ್, ಮಂಡಲದ ಕೋಶಾಧಿಕಾರಿ ಹರೀಶ್ ಎಂ.ಕೆ, 64ನೇ ವಾರ್ಡಿನ ಬೂತ್ ಅಧ್ಯಕ್ಷ ವಸಂತ, 65ನೇ ವಾರ್ಡಿನ ಬೂತ್ ಅಧ್ಯಕ್ಷ ಸುನೀಲ್, ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್, ಜಗದೀಶ್ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

ಉಮಾನಾಥ ಕೋಟ್ಯಾನ್‌ ಮತಯಾಚನೆ ಮಾಡಿದರು.
Share

Leave a Reply

Your email address will not be published. Required fields are marked *