MOODUBIDIRI: ದೇವರ ಮಕ್ಕಳೊಂದಿಗೆ ಒಂದು ದಿನ

ಮೂಡುಬಿದಿರೆ: ನಾವೆಲ್ಲರೂ ದೇವರ ಮಕ್ಕಳೇ.ಆದರೆ ವಿಕಲ ಚೇತನ ಮಕ್ಕಳು ದೇವರ ಮಕ್ಕಳಾಗಿ ವಿಶೇಷ ಗಮನ ಸೆಳೆದವರು. ಅವರನ್ನೂ ಅಕ್ಕರೆಯಿಂದ ಬೆಳೆಸಿ ಸಂಸ್ಕಾರವಂತರನ್ನಾಗಿಸುವ ಸವಾಲು ಸ್ವೀಕರಿಸಿದವರೆಲ್ಲರೂ ಅಭಿನಂದನಾರ್ಹರು ಎಂದು ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ,ಉದ್ಯಮಿ ಕೆ. ಶ್ರೀಪತಿ ಭಟ್ ಹೇಳಿದರು. ಅವರು 60 ರ ಸಂಭ್ರಮದಲ್ಲಿರುವ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಜ್ರಮಹೋತ್ಸವ ಕಾರ್ಯಕ್ರಮ ಸರಣಿಯ ಮೂರನೇ ಕಾರ್ಯಕ್ರಮದ ಅಂಗವಾಗಿ ಸಮಾಜ ಮಂದಿರ ಸಭಾದ ಸಹಯೋಗದಲ್ಲಿ ರವಿವಾರ ಸಮಾಜ ಮಂದಿರದಲ್ಲಿ ಜರಗಿದ ದೇವರ ಮಕ್ಕಳೊಂದಿಗೆ ಒಂದು ದಿನ ಎಂಬ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ವಿಕಲ ಚೇತನ ಮಕ್ಕಳಾದ ಅತೀತ್ ಮತ್ತು ಚೇತನಾ ದೀಪ ಪ್ರಜ್ವಲನದಲ್ಲಿ ಜತೆಗೂಡಿದರೆ ಚಿನ್ಮಯ್ ಭಟ್ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಪೂರ್ತಿ  ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ , ಪ್ರಾಂಶುಪಾಲೆ ಅನಿತಾ ರೋಡ್ರಿಗಸ್ ಉಪಸ್ಥಿತರಿದ್ದರು. ಸಮಾಜ ಮಂದಿರ ಸಭಾದ ಜತೆ ಕಾರ್ಯದಶರ್ಿ ಗಣೇಶ್ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಣೇಶೋತ್ಸವ ಸಮಿತಿಯ ಪ್ರಸನ್ನ ವಿ. ಶೆಣೈ ವಂದಿಸಿದರು.

ಕಾರ್ಯಕ್ರಮವನ್ನು ಉದ್ಯಮಿ ಶ್ರೀಪತಿ ಭಟ್‌ ದೀಪಬೆಳಗಿ ಉದ್ಘಾಟಿಸಿದರು.
Share

Leave a Reply

Your email address will not be published. Required fields are marked *