MOODBIDRI : ಆಮ್‌ ಆದ್ಮಿ ಭರ್ಜರಿ ಪ್ರಚಾರ

ಹೋದಲ್ಲೆಲ್ಲಾ ಭಾರೀ ಬೆಂಬಲ -ವಿಜಯನಾಥ ಶೆಟ್ಟಿ

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ವಿಜಯನಾಥ ವಿಠಲ ಶೆಟ್ಟಿ ಕ್ಷೇತ್ರ ಪ್ರವಾಸ ಕೈಗೊಂಡರು.

ಮೂಡುಬಿದಿರೆ: ಕ್ಷೇತ್ರದಾದ್ಯಂತ ಆಮ್‌ಆದ್ಮಿ ಪಕ್ಷಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಜನತೆ ಬದಲಾವಣೆ ಬಯಸಿದ್ದಾರೆ. ಹೊಸ ಚಿಂತನೆಗಳು, ಹೊಸ ಯೋಜನೆಗಳನ್ನು ಹೊಂದಿರುವ ಆಮ್‌ಆದ್ಮಿ ಪಾರ್ಟಿಗೆ ಮತಹಾಕುವುದಾಗಿ ತಿಳಿಸಿದ್ದಾರೆ ಎಂದು ಆಮ್‌ಆದ್ಮಿ ಪಾರ್ಟಿಯ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಜಯನಾಥ ವಿಠಲ ಶೆಟ್ಟಿ ಹೇಳಿದ್ದಾರೆ.

ಕ್ಷೇತ್ರವ್ಯಾಪ್ತಿಯಲ್ಲಿ ಬಿರುಸಿನ ಸಂಚಾರ ನಡೆಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಮುಂದಿನ ೨೫ವರುಷಗಳ ದೂರದೃಷ್ಠೀ ಚಿಂತನೆಯೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬಗ್ಗೆ ಆಮ್‌ಆದ್ಮಿ ಯೋಜನೆ ರೂಪಿಸಿದೆ ಎಂದವರು ಹೇಳಿದರು.

ಮಾದರೀ ಕ್ಷೇತ್ರ: ಮೂಡುಬಿದಿರೆಯನ್ನು ಮಾದರೀ ಕ್ಷೇತ್ರವಾಗಿ ಪರಿವರ್ತಿಸಲಾಗುವುದು. ಜನತೆಯ ಅವಶ್ಯಕತೆ ಬೇಕಾದ ಕುಡಿಯವ ನೀರು, ವಿದ್ಯುತ್‌, ಅಂಬ್ಯುಲೆನ್ಸ್‌ ಸೇವೆ, ಆರೋಗ್ಯ ಸೇವೆ ದಿನದ ೨೪ತಾಸೂ ಲಭ್ಯವಾಗುವಂತೆ ಮಾಡಲಾಗುವುದು. ಮುಂದಿನ ೨೫ವರುಷಗಳ ಗುರಿಯನ್ನಿಟ್ಟು ಕಾರ್ಯಯೋಜನೆ ರೂಪಿಸಲಾಗುತ್ತದೆ ಎಂದರು.

ಕ್ಷೇತ್ರದಾದ್ಯಂತ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಜನತೆಯಿಂದ ಉತ್ತಮ ಸ್ಪಂದನೆ ಲಭ್ಯವಾಗುತ್ತಿದೆ ಎಂದರು.

Share

Leave a Reply

Your email address will not be published. Required fields are marked *