Viral Video: ಮೊಮ್ಮಗನ ಮದುವೆಯಲ್ಲಿ 96 ವರ್ಷದ ಅಜ್ಜನ ಭರ್ಜರಿ ನೃತ್ಯ: ಫಿದಾ ಆದ ನೆಟ್ಟಿಗರು

ನೇಪಾಳ : ಮನೆಯಲ್ಲಿ ಶುಭ ಸಮಾರಂಭ ನಡೆಯುತ್ತೆ ಎಂದರೆ ಯಾರಿಗೆ ತಾನೆ ಖುಷಿ ಆಗಲ್ಲ… ಸಂಭ್ರಮದಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸು ಅಡ್ಡಿಬರಲ್ಲ ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ವೊಂದರಲ್ಲಿ ತನ್ನ ಮೊಮ್ಮಗನ ಮದುವೆ ಸಮಾರಂಭದಲ್ಲಿ 96 ವರ್ಷದ ಅಜ್ಜ ನೃತ್ಯ ಮಾಡಿರುವುದು ಭಾರಿ ವೈರಲ್ ಆಗಿದೆ.

ಅಲ್ಲದೆ ಅಜ್ಜನ ನೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಇಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ಮೊಮ್ಮಗನ ಮದುವೆ ಮೆರವಣಿಗೆಯಲ್ಲಿ ಸಂಬಂಧಿಕರು ನೇಪಾಳಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಇದನ್ನು ಕಂಡ 96 ವರ್ಷದ ಅಜ್ಜ ತಾನು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ನೇಪಾಳಿ ಹಾಡಿಗೆ ನೃತ್ಯ ಮಾಡಿ ಅಲ್ಲಿದ್ದ ಜನರ ಮನ ಗೆದ್ದಿದ್ದಾರೆ. ಸದ್ಯ ಅಜ್ಜ ನೃತ್ಯ ಮಾಡುವ ವಿಡಿಯೋ ನೇಪಾಳದ ಇಸ್ಟಾಗ್ರಾಮ್ ಖಾತೆಯೊಂದರಲ್ಲಿ ಅಪ್ಲೋಡ್ ಮಾಡಲಾಗಿದ್ದು ಭಾರಿ ಮೆಚ್ಚುಗೆ ಗಳಿಸಿದೆ.

ನಿಮಗೂ ಈ ವಿಡಿಯೋ ಇಷ್ಟ ಆಗಿದ್ದರೆ ಕಾಮೆಂಟ್ ಮಾಡಿ…

Share

Leave a Reply

Your email address will not be published. Required fields are marked *