ನವಿಲು ಮೊಟ್ಟೆ ಕದಿಯಲು ಮರವೇರಿದ ಯುವತಿ, ತಕ್ಕ ಪಾಠ ಕಲಿಸಿದ ನವಿಲು!

ನವದೆಹಲಿ: ಪ್ರಾಣಿ, ಪಕ್ಷಗಳಿಗೆ ತಮ್ಮ ಮರಿಗಳ ಬಗ್ಗೆ ಎಷ್ಟು ಕಾಳಜಿ, ಪ್ರೀತಿ ಇರುತ್ತದೆ ಎಂಬುದಕ್ಕೆ ಆಗಾಗ ವರದಿಯಾಗುತ್ತಿರುತ್ತದೆ. ಅದಕ್ಕೊಂದು ಸೇರ್ಪಡೆ ಎಂಬಂತೆ ಯುವತಿಯೊಬ್ಬಳು ಮರವೇರಿ ನವಿಲು ಮೊಟ್ಟೆ ಕದಿಯಲು ಹೋಗಿ ತಕ್ಕ ಶಾಸ್ತಿಗೊಳಗಾಗಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಇದನ್ನೂ ಓದಿ:Atiq Ahmad ವಕೀಲರ ಮನೆ ಬಳಿ ಕಚ್ಚಾ ಬಾಂಬ್ ಸ್ಫೋಟ: ಉದ್ದೇಶಿತ ದಾಳಿ ಅಲ್ಲ ಎಂದ ಪೊಲೀಸರು

ವಿಡಿಯೋದಲ್ಲಿ, ಯುವತಿಯೊಬ್ಬಳು ಮರವನ್ನೇರಿ ಗೂಡಿನಲ್ಲಿದ್ದ ನವಿಲಿನ ಮೊಟ್ಟೆಯನ್ನು ತೆಗೆದು ಕೆಳಗೆ ನಿಂತಿದ್ದ ಯುವತಿಗೆ ನೀಡುತ್ತಿದ್ದಳು. ಈ ಸಂದರ್ಭದಲ್ಲಿ ದಿಢೀರನೆ ಹಾರಿ ಬಂದ ನವಿಲು ಯುವತಿಯ ಮೇಲೆ ದಾಳಿ ನಡೆಸಿದ್ದು ದಾಖಲಾಗಿದೆ.

ಈ ವಿಡಿಯೋವನ್ನು ದ ಫಿಗೆನ್‌ ಎಂಬ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಗೂಡಿನಿಂದ ಮೊಟ್ಟೆ ಕದಿಯುತ್ತಿದ್ದಾಕೆಯ ಮೇಲೆ ಮೊದಲು ದಾಳಿ ನಡೆಸಿದ ನವಿಲು, ನಂತರ ಮರದ ಬುಡದಲ್ಲಿ ನಿಂತಿದ್ದ ಯುವತಿ ಮೇಲೂ ಹಾರಿ ದಾಳಿ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Share

Leave a Reply

Your email address will not be published. Required fields are marked *