ಕೀಬೋರ್ಡ್ ನುಡಿಸಿ ಕನ್ನಡ ಹಾಡು ಹೇಳಿದ ಬಾಲಕಿಯ ಪ್ರತಿಭೆಗೆ ಪ್ರದಾನಿ ಮೋದಿ ಫಿದಾ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶಿಷ್ಟ ಮತ್ತು ಇಂಟರೆಸ್ಟಿಂಗ್ ಅನ್ನಿಸೋ ವಿಡಿಯೋಗಳು ಅಥವಾ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ಕನ್ನಡದ ಪುಟ್ಟ ಹುಡುಗಿಯ ವಿಡಿಯೋವೊಂದು ಇದಕ್ಕೆ ಸೇರ್ಪಡೆಯಾಗಿದೆ.ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶಿಷ್ಟ ಮತ್ತು ಇಂಟರೆಸ್ಟಿಂಗ್ ಅನ್ನಿಸೋ ವಿಡಿಯೋಗಳು ಅಥವಾ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ಕನ್ನಡದ ಪುಟ್ಟ ಹುಡುಗಿಯ ವಿಡಿಯೋವೊಂದು ಇದಕ್ಕೆ ಸೇರ್ಪಡೆಯಾಗಿದೆ.ಸಂಗೀತ ನುಡಿಸಿ ಹಾಡುವ ಪುಟ್ಟ ಬಾಲಕಿಯ ವಿಡಿಯೋವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನಸೋತಿದ್ದು, ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಬಾಲಕಿಯ ಸಂಗೀತ ಪ್ರೀತಿಗೆ ಫಿದಾ ಆಗಿದ್ದಾರೆ.ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎನ್ನುವ ಪುಟ್ಟ ಬಾಲಕಿ ಕೀಬೋರ್ಡ್ ನುಡಿಸುತ್ತಾ ತನ್ನ ತಾಯಿಯ ಜೊತೆ ಹಾಡುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.ಈ ವಿಡಿಯೋವನ್ನು ಗಮನಿಸಿ ಪ್ರಧಾನಿ ಮೋದಿ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಈ ಪುಟ್ಟ ವಯಸ್ಸಿನಲ್ಲೇ ಮಗುವಿನ ಪ್ರತಿಭೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಅದ್ಭುತವಾದ ಕನ್ನಡ ಹಾಡಿಗೆ ಕೀಬೋರ್ಡ್ ನುಡಿಸಿ ಹಾಡಿರುವ ಬಾಲಕಿಯ ವಿಡಿಯೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.