ಮೂಡುಬಿದಿರೆ: ಯಾವ ಸರ್ಕಾರದ ಅನುದಾನವು ಇಲ್ಲದೆ ಕಳೆದ ಸುಮಾರು ಮೂರು ದಶಕಗಳಿಂದಲೂ ನಿರಂತರವಾಗಿ ಚಿಂತನಾಶೀಲ ಲೇಖಕರಾದ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿಕೊಂಡು ಕನ್ನಡದ ಹಿರಿಯ ವಿದ್ವಾಂಸರಿಗೆ ಮತ್ತು ಸಂಸ್ಕೃತಿಯಲ್ಲಿ ಕೆಲಸ ಮಾಡಿದ ಪ್ರತಿಭಾವಂತರಿಗೆ, ಸಂಸ್ಥೆಗಳಿಗೆ ಪ್ರತಿ ವರುಷವು ‘ಶಿವರಾಮ ಕಾರಂತ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದೆ ಈ ವರ್ಷ ಶಿವರಾಮ ಕಾರಂತ ಪ್ರಶಸ್ತಿಗಳಿಗೆ ನಾಡಿನ ಬಹುಮುಖಿ ವಿದ್ವಾಂಸರಾದ ಡಾ. ತಾಳ್ತಜೆ ವಸಂತಕುಮಾರ ರವರನ್ನು ಮತ್ತು ನಾಟಕಕಾರರು ದೂರದರ್ಶನ ಭಾಷೆಯನ್ನು ವೈಚಾರಿಕ ಮಾಧ್ಯಮವನ್ನಾಗಿ ಮಾಡಿ ಕರ್ನಾಟಕದ ಮನೆ ಮನೆಗೆ ತಲುಪಿಸಿದ ಶ್ರೀ ಟಿ.ಎನ್ ಸೀತಾರಾಮ್ ರವರಿಗೆ ನೀಡಲು ಪ್ರತಿಷ್ಠಾನ ತೀರ್ಮಾನಿಸಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾವಿನಕುಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಡು ನುಡಿಗಾಗಿ ನಿಸ್ವಾರ್ಥತೆಯಿಂದ ಸಾಹಿತ್ಯ ಶಿಕ್ಷಣ ಸಂಸ್ಕೃತಿಯ ಪರಿಚಾರಿಕೆ ಮಾಡುತ್ತಾ ಬಂದಿರುವ “ಮೂಡುಬಿದಿರೆ ಸಮಾಜ ಮಂದಿರ ಸಭಾ” ಸಂಸ್ಥೆಗೆ ಈ ವರ್ಷ “ಶಿವರಾಮ ಕಾರಂತ “ನೀಡುತ್ತಿರುವುದಾಗಿ ತಿಳಿಸಿದರು.

ಶಿವರಾಮ ಕಾರಂತ ಪುರಸ್ಕಾರ:
ಶಿವರಾಮ ಕಾರಂತ ಪುರಸ್ಕಾರ ಗಳನ್ನು ಪ್ರತಿ ವರ್ಷವೂ ಕೃತಿಗಳನ್ನು ಆಹ್ವಾನಿಸಿ ಅವುಗಳಲ್ಲಿ ಶ್ರೇಷ್ಠ ಕೃತಿ ಗಳಿಗಾಗಿ” ಶಿವರಾಮ ಪುರಸ್ಕಾರ”ಗಳನ್ನು ನೀಡುತ್ತಾ ಬಂದಿದೆ..ಈ ವರ್ಷ ಶ್ರೀ ಹಳೆಮನೆ ರಾಜಶೇಖರ ( ಕೃತಿ : ಸೂರ್ಯ ಜಲ ) ಡಾ. ಕೆ.ಎಸ್. ಚೈತ್ರ: ಕೃತಿ ದಂತ ಕಥೆಗಳು ) ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ( ಕೃತಿ: ಕನ್ನಡ ಚಿಂತನ – ರವರುಗಳಿಗೆ ಆಯ್ಕೆ ಸಮಿತಿಯ ತೀರ್ಮಾನದಂತೆ “ಶಿವರಾಮ ಕಾರಂತ” ಪುರಸ್ಕಾರಗಳನ್ನು ನೀಡಲು ಪ್ರತಿಷ್ಠಾನ ತೀರ್ಮಾನಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ. ಶ್ರೀಪತಿ ಭಟ್, ಆಡಳಿತ ಮಂಡಳಿ ಸದಸ್ಯ ರಾಜಾರಾಮ ಮೂಡುಬಿದಿರೆ ಇದ್ದರು.